ಅಂಕೋಲಾ ತಾಲೂಕಿನ ಬಾವಿಕೇರಿ ಬಳಿಯ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಆ ಭಾಗದ ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ. ಮೊದಲು ಅಂಕೋಲಾದಲ್ಲಿ ಪ್ರತಿಭಟಿಸಿದ ಗ್ರಾಮಸ್ಥರು ನಂತರ ಕಾರವಾರಕ್ಕೆ ಆಗಮಿಸಿ ಇಲ್ಲಿಯೂ ಧರಣಿ ನಡೆಸಿದರು.
ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರಿಕೆಗೆ ಸಮಸ್ಯೆ ಆಗುತ್ತದೆ ಎಂಬುದು ಪ್ರತಿಭಟನಾಕಾರರ ದೂರು. ಹೀಗಾಗಿ ಮೀನುಗಾರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿದ್ದರು. ಕೇಣಿ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಹೊರಟ ಸಾವಿರಾರು ಜನ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದರು.
ಇದಾದ ಮೇಲೆ ಕಾರವಾರಕ್ಕೆ ಆಗಮಿಸಿ ಪ್ರತಿಭಟಿಸಿದರು. ಜಿಲ್ಲಾಡಳಿತದ ಮೂಲಕ ವಾಣಿಜ್ಯ ಬಂದರು ವಿರೋಧಿಸಿ ಬರೆದ ಪತ್ರವನ್ನು ಸರ್ಕಾರಕ್ಕೆ ರವಾನಿಸಿದರು. ಈ ವೇಳೆ ವಾಣಿಜ್ಯ ಬಂದರು ವಿರುದ್ಧ ಘೋಷಣೆ ಕೂಗಿದರು.