ಯಲ್ಲಾಪುರ: ಮಹಿಳೆ ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ದುಶ್ಚಟಗಳ ವಿರುದ್ಧ ಹೋರಾಡುವುದಕ್ಕಾಗಿ ಯಲ್ಲಾಪುರದಲ್ಲಿ `ವರ್ಡ ಹ್ಯೂಮನ್ ರೈಟ್ಸ ವಿಶ್ವ ಆರ್ ಕೆ ಪೌಂಡೇಶನ್’ ಅಸ್ತಿತ್ವಕ್ಕೆ ಬಂದಿದೆ. ಶನಿವಾರ ಈ ಸಂಘಟನೆಯ ಮೊದಲ ಸಭೆ ಬಸ್ ನಿಲ್ದಾಣದ ಬಳಿಯಿರುವ ಕೋಡ್ಕಣಿ ಕಾಂಪ್ಲೇಕ್ಸಿನಲ್ಲಿ ನಡೆದಿದ್ದು, ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
`ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟ ನಡೆಸಲು ಎಲ್ಲರೂ ಬದ್ಧರಾಗಿರೋಣ’ ಎಂದು ಸರ್ವ ಸದಸ್ಯರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘಟನೆ ಜಿಲ್ಲಾಧ್ಯಕ್ಷೆ, ನ್ಯಾಯವಾದಿ ಅರ್ಚನಾ ಜಯಪ್ರಕಾಶ್ ನಾಯಕ ಅವರ ಸೂಚನೆ ಮೇರೆಗೆ ಸಭೆ ನಡೆದಿದ್ದು, ನ್ಯಾಯವಾದಿ ಬೇಬೀ ಅಮೀನಾ ಶೇಖ್ ಅವರು ಸಂಘಟನೆಯ ತಾಲೂಕಾ ಅಧ್ಯಕ್ಷರಾಗಿದ್ದಾರೆ. ಸಂಘಟನೆಯ ಜಿಲ್ಲಾ ಸದಸ್ಯರಾಗಿ ಸಂತೋಷ್ ಮರಾಠಿ, ಶೀಲಾ ಮರಾಠಿ, ಗಂಗಾ ಕೊಕರೆ, ಶೀಲಾ ಪಟಗಾರ್, ದಿಗಂಬರ ಮರಾಠಿ, ಟಿ ಪಿ ಆಯಿಷಾ, ಜುಬೇದಾ, ಗೀತಾ, ದೇವೇಂದ್ರ ಸಿದ್ದಿ, ಸತೀಶ್ ಗಾಂವಕರ್, ರವಿ ನಾಯ್ಕ, ಚಂದ್ರಕಾAತ ಮರಾಠಿ ಆಯ್ಕೆಯಾಗಿದ್ದಾರೆ.
`ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ವರ್ಡ ಹ್ಯೂಮನ್ ರೈಟ್ಸ ವಿಶ್ವ ಆರ್ ಕೆ ಪೌಂಡೇಶನ್ ಸದಸ್ಯರು ಒಟ್ಟಿಗೆ ಶ್ರಮಿಸಬೇಕು. ಅನ್ಯಾಯಕ್ಕೆ ಒಳಗಾದವರ ಪರವಾಗಿ ನಾವಿರಬೇಕು’ ಎಂದು ನ್ಯಾಯವಾದಿ ಬೇಬೀ ಅಮೀನಾ ಶೇಖ್ ಕರೆ ನೀಡಿದರು. `ಈಚೆಗೆ ಚಿಕ್ಕ ಮಕ್ಕಳು ದುಶ್ಚಟಕ್ಕೆ ಒಳಗಾಗುತ್ತಿದ್ದು, ಅವರ ಭವಿಷ್ಯಕ್ಕೆ ಹಾನಿಯಾಗುತ್ತಿದೆ. ಹೀಗಾಗಿ ದುಶ್ಚಟಗಳಿಂದ ದೂರವಿರುವ ಬಗ್ಗೆ ಜಾಗೃತಿ ಮೂಡಿಸುವ ಸಂಘಟನೆ ನಿರಂತರವಾಗಿರಬೇಕು’ ಎಂದರು.