6
  • Latest

ಮಟ್ಕಾ ಕಾಸಿಗೂ ರಸೀದಿ ಕೊಡುವ ವ್ಯಾಪಾರಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Tuesday, March 31, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಟ್ಕಾ ಕಾಸಿಗೂ ರಸೀದಿ ಕೊಡುವ ವ್ಯಾಪಾರಿ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಶಿರಸಿ: ಬಿಸಲಕೊಪ್ಪ ಗ್ರಾ ಪಂ ಕ್ರಾಸಿನ ಬಳಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಹೀಗಾಗಿ ಇನ್ಮುಂದೆ ಕೇಶವ ನಾಯ್ಕ ಇಲ್ಲಿ ಮಟ್ಕಾ ಆಡಿಸುವ ಹಾಗಿಲ್ಲ!

ಎಕ್ಕಂಬಿ ಬಳಿಯ ಕಾನಗದ್ದೆ ಕೇಶವ ನಾಯ್ಕ (34) ವ್ಯಾಪಾರಿ. ಬಿಸಲಕೊಪ್ಪ ಗ್ರಾ ಪಂ ತಿರುವಿನಲ್ಲಿ ಮಟ್ಕಾ ಆಡಿಸುವುದು ಅವರ ಖಯಾಲಿ. 1 ರೂಪಾಯಿಗೆ 80 ರೂ ನೀಡುವುದಾಗಿ ಜನರನ್ನು ಮರಳು ಮಾಡಿ ಕೇಶವ ನಾಯ್ಕ ಹಣ ಪಡೆಯುತ್ತಿದ್ದರು. ಅವರು ಹೇಳಿದ ಸಂಖ್ಯೆಯನ್ನು ತಮ್ಮ ಚೀಟಿಯಲ್ಲಿ ಬರೆದುಕೊಳ್ಳುತ್ತಿದ್ದ ಕೇಶವ ನಾಯ್ಕ, ಸಣ್ಣ ಚೀಟಿಯಲ್ಲಿ ಅದೇ ಸಂಖ್ಯೆ ಬರೆದು ಹಣ ಹೂಡಿದವರಿಗೆ ರಸೀದಿ ರೂಪದಲ್ಲಿ ಕೊಡುತ್ತಿದ್ದರು. ಜೂಜುಕೋರರು ಹಣ ಹೂಡಿದ ಸಂಖ್ಯೆ ಅವರಿಗೆ ಮರೆಯಬಾರದು ಎಂದು ಅವರು ಚೀಟಿ ಬರೆದು ಕೊಡುತ್ತಿದ್ದರು.

ADVERTISEMENT
ADVERTISEMENT

ನ 30ರಂದು ಕೇಶವ ನಾಯ್ಕ ಮಟ್ಕಾ ಆಡಿಸುತ್ತಿದ್ದಾಗ ಪೊಲೀಸರ ಬಳಿ ಸಿಕ್ಕಿಬಿದ್ದರು. ಪೊಲೀಸ್ ಉಪನಿರೀಕ್ಷಕ ಪ್ರತಾಪ ಪಚ್ಚಗೋಳ ದಾಳಿ ನಡೆಸಿ ಜನರಿಂದ ಸಂಗ್ರಹಿಸಿದ್ದ 1100ರೂ ಹಣವನ್ನು ವಶಕ್ಕೆ ಪಡೆದರು. ಓಸಿ ಹಣ ಪಡೆದು ಜೂಜಾಡಲು ಬಂದವರಿಗೆ ಚೀಟಿ ಕೊಡುವ ವೇಳೆಯಲ್ಲಿಯೇ ಪೊಲೀಸರು ಕೇಶವ ನಾಯ್ಕರನ್ನು ಹಿಡಿದರು. ಸಂಖ್ಯೆ ಬರೆದುಕೊಡಲು ಕಿಸೆಯಲ್ಲಿರಿಸಿಕೊಂಡಿದ್ದ ಸಣ್ಣ ಸಣ್ಣ ಕಾಗದದ ಚೂರುಗಳ ಜೊತೆ ಬಾಲ್‌ಪೆನ್ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಶಕ್ಕೆ ಪಡೆದರು.

ಈ ಟೇಲರ್’ಗೆ ಮಟ್ಕಾ ಪಾರ್ಟ ಟೈಂ ಕೆಲಸ!
ಸಿದ್ದಾಪುರ: ಬಟ್ಟೆ ಹೊಲಿದು ಬದುಕು ಕಟ್ಟಿಕೊಂಡಿರುವ ಶ್ರೀಧರ ಕಲ್ಮೆಟ್ಟು ಅವರಿಗೆ ಉತ್ತಮ ಆದಾಯವಿರಲಿಲ್ಲ. ಹೀಗಾಗಿ ಅವರು ಮಟ್ಕಾ ಆಡಿಸುವ ಮೂಲಕ ಆದಾಯಗಳಿಸುತ್ತಿದ್ದು, ಪೊಲೀಸರು ಕಾನೂನುಬಾಹಿರವಾದ ಈ ಆಟಕ್ಕೆ ತಡೆ ಒಡ್ಡಿದ್ದಾರೆ.

Advertisement. Scroll to continue reading.

ಕೊಂಡ್ಲಿ ಮಾರಿಕಾಂಬಾ ನಗರದ ಶ್ರೀಧರ ಕಲ್ಮೆಟ್ಟು (40) ತಮ್ಮ ಮನೆ ಮುಂದೆಯೇ ಮಟ್ಕಾ ಆಡಿಸುತ್ತಿದ್ದರು. ನ 30ರಂದು ಸಿದ್ದಾಪುರ ಪಿಐ ಸೀತಾರಾಮ ಅವರನ್ನು ಹಿಡಿದರು. ಜನರಿಂದ ಸಂಗ್ರಹಿಸಿದ 720ರೂ ಹಣದ ಜೊತೆ ಮಟ್ಕಾ ಪರಿಕ್ಕರಗಳನ್ನು ಪೊಲೀಸರು ವಶಕ್ಕೆ ಪಡೆದರು.

ಮೀನು ಮಾರ್ಕೇಟ್ ಮುಂದೆ ಮಟ್ಕಾ ಜೋರು!
ಕುಮಟಾ: ದ್ವಾರಕಾ ಹೊಟೇಲಿನ ಹಳೆ ಮೀನು ಮಾರುಕಟ್ಟೆ ಎದುರು ಪಾನ್ ಅಂಗಡಿ ನಡೆಸುವ ಕೇಶವ ಗೌಡ ಮಟ್ಕಾ ಆಡಿಸುತ್ತಿದ್ದರು. ಕಾನೂನುಬಾಹಿರ ಆಟ ಆಡದಂತೆ ಪೊಲೀಸರು ಅವರಿಗೂ ಎಚ್ಚರಿಕೆ ನೀಡಿದರು.

ನೆಹರು ನಗರದ ಕೇಶವ ಗೌಡ ಅವರಿಗೆ ಬೀಡಾ ಅಂಗಡಿ ಪ್ರಮುಖ ಆದಾಯ. ಅದಾಗಿಯೂ ಮಟ್ಕಾ ಆಡಿಸುವುದು ಎಂದರೆ ಅವರಿಗೆ ಮೋಜು. ಹೀಗಾಗಿ ಅವರು ಮಟ್ಕಾ ಆಡಿಸಿ ಹಣಗಳಿಸುತ್ತಿದ್ದರು. ಈ ಆಟ ನಿಯಮಬಾಹಿರ ಎಂಬ ಅರಿವಿದ್ದರೂ ಕದ್ದು ಮುಚ್ಚಿ ವಹಿವಾಟು ನಡೆಸುತ್ತಿದ್ದರು. ಪಾನ್ ಅಂಗಡಿಗೆ ಬರುವವರಿಗೆ ಆಮೀಷ ಒಡ್ಡಿ ಹಣ ಪಡೆಯುತ್ತಿದ್ದರು.

Advertisement. Scroll to continue reading.

ಪಿಎಸ್‌ಐ ಮಂಜುನಾಥ ಗೌಡರ್ ದಾಳಿ ನಡೆಸಿ ಜನರಿಂದ ಸಂಗ್ರಹಿಸಿದ್ದ 910ರೂ ಹಣದ ಜೊತೆ ಮಟ್ಕಾ ಪರಿಕ್ಕರಗಳನ್ನು ವಶಕ್ಕೆ ಪಡೆದರು. ಕೇಶವ ಗೌಡರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.

 

ShareSendTweetShare
ADVERTISEMENT
Previous Post

ಕಬ್ಬಡ್ಡಿ.. ಕಬ್ಬಡ್ಡಿ.. ಕಿರವತ್ತಿಯಲ್ಲಿ ರಾಜ್ಯ ಮಟ್ಟದ ಕಬ್ಬಡ್ಡಿ!

Next Post

ಪಶ್ಚಿಮಘಟ್ಟದ ಗುಡ್ಡ ಗಡಗಡ: ಮಲೆನಾಡು ಭಾಗದಲ್ಲಿ ಭೂ ಕಂಪನದ ಅನುಭವ!

Next Post

ಪಶ್ಚಿಮಘಟ್ಟದ ಗುಡ್ಡ ಗಡಗಡ: ಮಲೆನಾಡು ಭಾಗದಲ್ಲಿ ಭೂ ಕಂಪನದ ಅನುಭವ!

ಸೂರು ನಿರ್ಮಾಣಕ್ಕೆ ಸಹಾಯ ಹಸ್ತದ ನೆರವು: ಬಡ ಮಹಿಳೆ ಕನಸು ಇದೀಗ ನನಸು!

ದಾಳಿಂಬೆ ಹಣ್ಣು | ಕೆಜಿಗೆ 140ರೂ.. ಅದಾಗಿಯೂ ಹಣ್ಣಿನ ವ್ಯಾಪಾರಿಗೆ 3 ಲಕ್ಷ ರೂ ನಷ್ಟ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.