ಮುಂಡಗೋಡು: ಹೊಲಕ್ಕೆ ಹೊಡೆಯಲು ತಂದಿಟ್ಟಿದ್ದ ಕ್ರಿಮಿನಾಶಕ ಸೇವಿಸಿದ ನಿರ್ಮಲಾ ಗುಡಗುಡಿ ಸಾವನಪ್ಪಿದ್ದಾರೆ.
ಮುಂಡಗೋಡು ಕೊಡಂಬಿಯ ನಿರ್ಮಲಾ ನ 21ರಂದು ಬೇಸರದಲ್ಲಿದ್ದರು. ಅದೇ ದಿನ ಸಂಜೆ ಅವರು ಕ್ರಿಮಿನಾಶಕ ಸೇವಿಸಿದ್ದರು. ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಾಕಷ್ಟು ಪ್ರಯತ್ನ ನಡೆಸಿದರೂ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ನ 29ರಂದು ಅವರು ಸಾವನಪ್ಪಿದ್ದರು. ಹಾವೇರಿಯಲ್ಲಿರುವ ನಿರ್ಮಲಾ ಅವರ ತಂದೆ ಮೈಲಾರಪ್ಪ ಅವರು ಪೊಲೀಸ್ ಪ್ರಕರಣ ದಾಖಲಿಸಿ, ಆಸ್ಪತ್ರೆಯಿಂದ ಶವ ಬಿಡಿಸಿಕೊಂಡರು.