6 Skip to content

ದರ್ಶನ್’ಗೆ ತಪ್ಪಿದ ರಾಯಬಾರಿ ಹುದ್ದೆ

ಬೆಂಗಳೂರು: ಕೃಷಿ ಇಲಾಖೆಯ ರಾಯಬಾರಿಯಾಗಿದ್ದ ನಟ ದರ್ಶನ್’ರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿಯಾಗಿ ಮುಂದುವರಿಯುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.

‘ರೇಣುಕಾಸ್ವಾಮಿ ಹತ್ಯೆ ಪ್ರಕರಣ ಪಾರದರ್ಶಕವಾಗಿ ತನಿಖೆ ನಡೆಸಲಾಗುತ್ತಿದೆ. ದರ್ಶನ್‍ಗೆ ರಾಜಮರ್ಯಾದೆಯ ಪ್ರಶ್ನೆಯೇ ಇಲ್ಲ. ಆರೋಪ ಸಾಬೀತಾದರೆ ಅವರಿಗೆ ಶಿಕ್ಷೆ ಆಗುತ್ತದೆ. ಗಂಭೀರ ಆರೋಪ ಎದುರಿಸುತ್ತಿರುವಾಗ ಅವರು ಕೃಷಿ ಇಲಾಖೆಯ ರಾಯಭಾರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ’ ಎಂದರು.ದದ

ದರ್ಶನ್ ಈ ಮೊದಲು ಅರಣ್ಯ ಇಲಾಖೆಯ ರಾಯಬಾರಿ ಸಹ ಆಗಿದ್ದರು. ಆಗಲೂ ವನ್ಯಜೀವಿಗಳಿಗೆ ತೊಂದರೆ ನೀಡಿದ ಆರೋಪ ಎದುರಾಗಿತ್ತು.

Leave a comment

Leave a Reply

You cannot copy content of this page