ಕಾರವಾರ: ಅಮದಳ್ಳಿಯಲ್ಲಿ ನಿರ್ಮಿಸುತ್ತಿರುವ ಕೋಸ್ಟಗಾರ್ಡ ಕಚೇರಿ ಕೆಲಸಕ್ಕೆ ಕೆಲವರು ಅಡ್ಡಿಪಡಿಸಿದ್ದಾರೆ. ಆದರೆ, ಅಡ್ಡಿಪಡಿಸಿದವರು ಯಾರು ಎಂದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಅಪರಿಚಿತರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಅಮದಳ್ಳಿಯಲ್ಲಿ ಇಂಡಿಯನ್ ಕೋಸ್ಟಗಾರ್ಡ ಕಚೇರಿ ನಿರ್ಮಾಣ ಹಾಗೂ ಇನ್ನಿತರ ಕಟ್ಟಡಗಳ ಕಟ್ಟುವಿಕೆಗೆ ಮೇಕೊನ್ ಕಂಪನಿ ಗುತ್ತಿಗೆ ಪಡೆದಿದೆ. ಮೆಕೊನ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ರಿಜು ಪಿ ಎ, ಅಮದಳ್ಳಿ ಕಂತ್ರಿವಾಡ ರಸ್ತೆ ಮೂಲಕ ಅಗತ್ಯ ಸಾಮಗ್ರಿಗಳನ್ನು ಒಯ್ಯುತ್ತಿದ್ದಾರೆ. ಅಮದಳ್ಳಿ ಟೋಲ್‌ನಾಕಾ ರಸ್ತೆಯ ಕಂತ್ರಿವಾಡದಿAದ ಸಾಗುವಾಗಲೇ ಅವರಿಗೆ ಪದೇ ಪದೇ ಆತಂಕ ಎದುರಾಗುತ್ತಿದೆ.
ನ 29ರಂದು ಸಹ ಅವರು ಲಾರಿ ಮೂಲಕ ಸಾಮಗ್ರಿ ಒಯ್ಯುವಾಗ ಕೆಲಸವರು ಅಡ್ಡಗಟ್ಟಿದ್ದರು. ಅವರಿಂದ ಕೆಲಸಕ್ಕೆ ತೊಂದರೆ ಆಗುತ್ತಿದೆ ಎಂದು ರಿಜು ಪಿ ಎ ಪೊಲೀಸ್ ದೂರು ನೀಡಿದ್ದಾರೆ