ಯಲ್ಲಾಪುರ: ಡಿ 2ರಂದು ನಡೆದ ಕಿರವತ್ತಿ ಸೊಸೈಟಿ ಚುನಾವಣೆಯಲ್ಲಿ ವಿಜಯ ಮಿರಾಶಿ ಅಭಿಮಾನಿ ಬಳಗ ಮೇಲುಗೈ ಸಾಧಿಸಿದೆ. ಸೊಸೈಟಿ ಚುನಾವಣೆಯಲ್ಲಿ ಆಯ್ಕೆಯಾದವರೆಲ್ಲರೂ ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ.
ಈಚೆಗೆ ನಡೆದ ಯಲ್ಲಾಪುರ ಪ ಪಂ ಉಪಚುನಾವಣೆಯಲ್ಲಿ ಸಹ ಕಾಂಗ್ರೆಸ್ ಗೆದ್ದಿತ್ತು. ಸೋಮವಾರ ಕಿರವತ್ತಿಯ ಸೇವಾ ಸಹಕಾರಿ ಸಂಘದ ಚುನಾವಣೆ ನಡೆದಿದ್ದು, 12 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಸಂಜಯ್ ವಿಠ್ಠಲ ಮಿರಾಶಿ, ಮುಬಾರಕ್ ಅಬ್ಬಿಗೆರೆ, ಹರುನ್ ಇಸ್ಮಾಯಿಲ್ ಶೇಖ್, ಪರಶುರಾಮ ಮಹದೇವ ಹರಿಜನ್, ಗಣಪತಿ ರಾಮ ಶಿರನಾಲ್ಕರ್, ನಾವು ಲಕ್ಕು ಪಟಕಾರೆ, ಮಹದೇವಿ ನಾಗೇಂದ್ರ ಮರಾಠಿ, ಹನುಮಂತ ಲಕ್ಷ್ಮಪ್ಪ ಸೋಮಾಪುರಕರ, ಫಾತೀಮ ಮೆಹಬೂಬ್ ಸಾಬ್ ಕಿರವತ್ತಿ, ಆಶಾ ಬಿ ಇಮಾಮ್ ಸಾಬ್ ತಟ್ಟೀಗೇರಿ, ಜಾಫರ್ ಹುಸೇನ್ ಸಾಬ್ ಒಂಟಿ ಹಾಗು ನೂರ್ ಅಹ್ಮದ್ ಸೈಯ್ಯದ್ ಈ ಸೊಸೈಟಿಯ ನೂತನ ಸದಸ್ಯರಾಗಿದ್ದಾರೆ.
ಸಹಕರಿಸಿದವರಿಗೆ ಕೃತಜ್ಞತೆ:

ಈ ಎಲ್ಲಾ ಸದಸ್ಯರ ಅವಿರೋಧ ಆಯ್ಕೆಗಾಗಿ ಜಿ ಪಂ ಮಾಜಿ ಸದಸ್ಯ ವಿಜಯ ಮಿರಾಶಿ ಪ್ರಯತ್ನಿಸಿದ್ದರು. ಹೀಗಾಗಿ ಸಹಕರಿಸಿದ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು `ಕಿರವತ್ತಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘವೂ ಉತ್ತುಂಗಕ್ಕೆ ಏರಲಿ’ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಪ್ರಮುಖರಾದ ಮುರಳಿ ಹೆಗಡೆ, ರಹಮತ್ ಅಬ್ಬಿಗೆರೆ, ರಾಘವೇಂದ್ರ ಗೊಂದಿ, ಬಾಬು ಸಿದ್ದಿ, ವಿಲ್ಸನ್ ಫರ್ನಾಂಡೀಸ್, ಮಹೇಶ್ ಗೋಕರ್ಣ, ಬಾಬಾ ಶೇಖ್, ಹಾಗು ನೂರ್ ಅಹ್ಮದ್ ಶೇಖ್ ಆಯ್ಕೆಯಾದ ಸದಸ್ಯರಿಗೆ ಶುಭ ಕೋರಿದರು.



