ಭಟ್ಕಳ: ಬ್ಯಾಟರಿ ಮಾರಾಟ ನೆಪದಲ್ಲಿ ವಾಟ್ಸಪ್ ವಿಡಿಯೋ ಕಾಲ್ ಮಾಡಿದ ಕಳ್ಳರು ಅಂಚೆ ನೌಕರ ಗೋವಿಂದ ಹೆಗಡೆ ಅವರ ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷ ರೂ ಹಣ ಎಗರಿಸಿದ್ದಾರೆ.
ಕೋಟಖಂಡ ಗ್ರಾಮದ ಮಾರುಕೇರಿ ಗೋವಿಂದ ವಾಸುದೇವ ಹೆಗಡೆ ಅವರು ನ 27ರ ರಾತ್ರಿ 8.30ಕ್ಕೆ ಮೊಬೈಲ್ ನೋಡುತ್ತಿದ್ದರು. ಆಗ ಅವರಿಗೆ ವಿಡಿಯೋ ಕಾಲ್ ಒಂದು ಬಂದಿದ್ದು, ಅದನ್ನು ಸ್ವೀಕರಿಸಿದರು.
`ಬ್ಯಾಟರಿ ಕಂಪನಿ ಕಡೆಯಿಂದ ಮಾತನಾಡುತ್ತಿದ್ದೇವೆ’ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಅವರ ವಾಟ್ಸಪ್’ಗೆ ಕೆಲ ಲಿಂಕ್ ಕಳುಹಿಸಿದ್ದು ಅದನ್ನು ಗೋವಿಂದ ಹೆಗಡೆ ಅವರು ಡೌನ್ಲೋಡ್ ಮಾಡಿದರು. ಬ್ಯಾಟರಿ ಆರ್ಡರ್ ಮಾಡುವಂತೆ ಕರೆ ಮಾಡಿದ ವ್ಯಕ್ತಿ ಹೇಳಿದಾಗ `ಹೂ’ ಅಂದರು.
2ರೂ ಆನ್‌ಲೈನ್ ಪೇಮೆಂಟ್ ಮಾಡುವಂತೆ ಆತ ಕಾಡಿಸಿದಾಗ ಗೋವಿಂದ ಹೆಗಡೆ ಅವರು ಆತನ ಫೋನ್ ಕಟ್ ಮಾಡಿದರು. ರಾತ್ರಿ 1.30ಕ್ಕೆ ಮೊಬೈಲಿಗೆ ಮೆಸೆಜ್ ಬಂದ ಕಾರಣ ನಿದ್ದೆಯಿಂದ ಎದ್ದ ಅವರು ಮತ್ತೆ ಮಲಗಲಿಲ್ಲ. ಕಾರಣ ಕರ್ಣಾಟಕ ಬ್ಯಾಂಕಿನಲ್ಲಿದ್ದ ಅವರ 1 ಲಕ್ಷ ರೂ ಹಣವನ್ನು ಕಳ್ಳರು ಎಗರಿಸಿದ್ದು, ಆ ಬಗ್ಗೆ ಬ್ಯಾಂಕಿನಿoದ ಮೆಸೆಜ್ ಬಂದಿತ್ತು.
ಫೋನ್ ಫೇ ಮೂಲಕ ಹಣ ಎಗರಿಸಿದ ಬಗ್ಗೆ ಗೋವಿಂದ ಹೆಗಡೆ ಅವರು ಪೊಲೀಸ್ ದೂರು ನೀಡಿದ್ದಾರೆ.