6
  • Latest

ಕಾಸು ಕದ್ದ ಕಳ್ಳಿಗೂ ಕನಿಕರ ತೋರಿದ ಶಾಸಕ ದಿನಕರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕಾಸು ಕದ್ದ ಕಳ್ಳಿಗೂ ಕನಿಕರ ತೋರಿದ ಶಾಸಕ ದಿನಕರ!

AchyutKumar by AchyutKumar
in ಸ್ಥಳೀಯ

ಕುಮಟಾ: ಶಾಸಕ ದಿನಕರ ಶೆಟ್ಟಿ ಅವರ ಮನೆಯಲ್ಲಿ 80 ಸಾವಿರ ರೂ ಹಣ ಕಳ್ಳತನವಾಗಿರುವುದು ಸತ್ಯ. ಆದರೆ, ಕಾಸು ಕದ್ದ ಕಳ್ಳಿಯನ್ನು ಕ್ಷಮಿಸುವ ಮೂಲಕ ಅವರು ಉದಾರತನ ತೋರಿದ್ದಾರೆ.

ಮಹಿಳೆಯೊಬ್ಬರು ಶಾಸಕ ದಿನಕರ ಶೆಟ್ಟಿ ಅವರ ಮನೆಗೆ ಆಗಮಿಸಿದ್ದರು. ಆರ್ಥಿಕ ಸಂಕಷ್ಟವಿರುವ ಕಾರಣ ನೆರವು ನೀಡುವಂತೆ ಮನವಿ ಮಾಡಿದ್ದರು. ಆಗ ಶಾಸಕರು 10 ಸಾವಿರ ರೂ ಕೊಟ್ಟು ಕಳುಹಿಸಿವಂತೆ ಆಪ್ತ ಕಾರ್ಯದರ್ಶಿಗೆ ಸೂಚಿಸಿದ್ದರು. ಅದರ ಪ್ರಕಾರ ಅವರ ಆಪ್ತ ಕಾರ್ಯದರ್ಶಿ 10 ಸಾವಿರ ರೂ ಹಣ ನೀಡಿದ್ದು, ಹಣದ ಪೆಂಡೆಯನ್ನು ತಮ್ಮ ಜೊತೆಯಲ್ಲಿಯೇ ಇರಿಸಿಕೊಂಡಿದ್ದರು.

ಇದೇ ವೇಳೆ ಶಾಸಕರ ಸಂಬoಧಿ ನಿಧನರಾದ ಸುದ್ದಿ ಬಂದಿದ್ದು, ದಿನಕರ ಶೆಟ್ಟಿ ಅವರು ಅಂತಿಮ ದರ್ಶನಕ್ಕಾಗಿ ಅಹ್ಮದಾಬಾದಿಗೆ ಹೋಗುವವರಿದ್ದರು. ಆಪ್ತರ ನಿಧನದ ಸುದ್ದಿಯಿಂದ ದಿನಕರ ಶೆಟ್ಟಿ ಆಘಾತಕ್ಕೆ ಒಳಗಾಗಿದ್ದರು. ತಮ್ಮ ಪ್ರಯಾಣ ವೆಚ್ಚಕ್ಕಾಗಿ ಆಪ್ತ ಕಾರ್ಯದರ್ಶಿ ಬಳಿಯಿದ್ದ ಹಣದ ಬಗ್ಗೆ ಪ್ರಶ್ನಿಸಿದಾಗ ಅದು ಕಣ್ಮರೆಯಾಗಿರುವುದು ಗಮನಕ್ಕೆ ಬಂದಿತು. ನೆರವು ಕೇಳಲು ಬಂದ ಮಹಿಳೆ ಅದನ್ನು ಎಗರಿಸಿರುವುದು ನಂತರ ಗೊತ್ತಾಯಿತು.

ಗೋವಾ ಮೂಲಕ ವಿಮಾನ ಏರಿ ಅಹ್ಮದಾಬಾದಿಗೆ ಹೋಗಬೇಕಿದ್ದ ದಿನಕರ ಶೆಟ್ಟಿ ಹಣದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ತಮ್ಮ ಅಗತ್ಯಕ್ಕಾಗಿ ತೆಗೆದಿರಿಸಿದ್ದ ಹಣ ಕಣ್ಮರೆಯಾಗಿದ್ದರಿಂದ ಅವರು ಸಮಸ್ಯೆ ಅನುಭವಿಸಿದರು. ಅದಾಗಿಯೂ, ಸಾವನಪ್ಪಿದ ಸಂಬoಧಿಕರ ಕುಟುಂಬಕ್ಕೆ ಸಾಂತ್ವಾನ ಹೇಳುವುದಕ್ಕಾಗಿ ವಿಮಾನ ಏರಿ ಅಹ್ಮದಾಬಾದಿನ ಕಡೆ ಹೊರಟರು.

ಇನ್ನೂ ಹಣ ಎಗರಿಸಿದ ಮಹಿಳೆಯ ಬಗ್ಗೆ ಶಾಸಕ ದಿನಕರ ಶೆಟ್ಟಿ ಅವರ ಆಪ್ತ ಕಾರ್ಯದರ್ಶಿ ವಿಚಾರಣೆ ನಡೆಸಿದರೂ, ಆಕೆಯ ವಿರುದ್ಧ ಪೊಲೀಸ್ ದೂರು ನೀಡದಂತೆ ದಿನಕರ ಶೆಟ್ಟಿ ಸೂಚಿಸಿದರು. `ಕಷ್ಟದಲ್ಲಿದ್ದ ಮಹಿಳೆ ತನಗೆ ನೀಡಿದ ಹಣ ಎಂದು ಭಾವಿಸಿ ಅಲ್ಲಿದ್ದ ಹಣವನ್ನು ಪಡೆದಿರಬಹುದು. ನೊಂದವರಿಗೆ ನೆರವು ನೀಡುವುದು ನಮ್ಮ ಕರ್ತವ್ಯ. ಅದಕ್ಕೆ ರೆಕ್ಕೆ-ಪುಕ್ಕ ಕಟ್ಟಿ ದೊಡ್ಡದು ಮಾಡುವುದು ಬೇಡ’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದರು.

ShareSendTweetShare
Previous Post

ಕಾಸು ಕೊಟ್ಟರೂ ಮುಂದೆ ಚಲಿಸದ ಬೆಂಗಳೂರು ಬಸ್ಸು!

Next Post

ಈ ರಸ್ತೆ ತುಂಬಾ ಕಿಡಿಗೇಡಿಗಳ ಕಾಟ: ರಿಪೇರಿಗೆ ಬಂದ ಬೈಕ್ ಮೇಲೆ ಕಲ್ಲು!

Next Post

ಈ ರಸ್ತೆ ತುಂಬಾ ಕಿಡಿಗೇಡಿಗಳ ಕಾಟ: ರಿಪೇರಿಗೆ ಬಂದ ಬೈಕ್ ಮೇಲೆ ಕಲ್ಲು!

ಖರೀದಿ ಆಸ್ತಿ | ಅಭಿವೃದ್ಧಿಗೆ ಹೋದವರಿಗೆ ಪೆಟ್ರೋಲ್ ಪ್ರೋಕ್ಷಣೆ!

ಸಂತ್ರಸ್ತ ಬಾಲಕಿಗೆ ನ್ಯಾಯ ಕೊಡಿಸಿದ ಸರ್ಕಾರಿ ವಕೀಲೆ: ಅತ್ಯಾಚಾರಿಗೆ 20 ವರ್ಷ ಜೈಲು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.