ಶಿರಸಿ: ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕುದುರೆ ಇದೀಗ ಹೆಣ್ಣು ಮರಿಗೆ ಜನ್ಮ ನೀಡಿದೆ.
ಶಿವಮೊಗ್ಗದಲ್ಲಿ ಅಪಘಾತಕ್ಕೀಡಾದ ಕುದುರೆಗೆ ಶಿರಸಿಯ ಅಮೇಜಿಂಗ್ ಪ್ಲೆಟ್ ಪ್ಲಾನೆಟ್’ನಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುದುರೆಗೆ ಒಂದು ಕಣ್ಣು ಇರಲಿಲ್ಲ. ಚರ್ಮ ಸಹ ಸುಲಿದಿದ್ದು, ಬದುಕುವ ಲಕ್ಷಣಗಳು ಕಾಣುತ್ತಿರಲಿಲ್ಲ.
ಗರ್ಭಕೋಶ ಸಹ ಹೊರಗೆ ಬಂದಿತ್ತು. ಅದಾಗಿಯೂ ಅಮೇಜಿಂಗ್ ಪ್ಲೆಟ್ ಪ್ಲಾನೆಟ್’ನವರು ಕುದುರೆಯ ಆರೈಕೆಗೆ ಒಪ್ಪಿಕೊಂಡಿದ್ದರು. ಆ ಕುದುರೆ ಗರ್ಭಿಣಿ ಎಂದು ತಿಳಿದು ವಿಶೇಷ ಆರೈಕೆ ಕಲ್ಪಿಸಿದ್ದರು.
ನಾಲ್ಕು ತಿಂಗಳುಗಳ ಕಾಲ ಗಾಯಗೊಂಡ ಕುದುರೆಗೆ ಪ್ರಾಣಿತಜ್ಞ ರಾಜೇಂದ್ರ ಸಿರ್ಸಿಕರ್ ಜೋಪಾನ ಮಾಡಿದರು. ಇದೀಗ ಕುದುರೆ ಹೆಣ್ಣು ಕರುವಿಗೆ ಜನ್ಮ ನೀಡಿದ್ದು, ತಾಯಿ ಕುದುರೆಯೂ ಚೇತರಿಸಿಕೊಳ್ಳುತ್ತಿದೆ.