ಹೊನ್ನಾವರ: ಮಾಜಾಳಿ ಅಬಕಾರಿ ಅಧಿಕಾರಿಗಳ ಕಣ್ಣು ತಪ್ಪಿಸಿ ಗೋವಾದಿಂದ ಸಾಗಿಸಿದ್ದ ಸರಾಯಿ ಬಾಟಲಿಗಳು ಹೊನ್ನಾವರದಲ್ಲಿ ಸಿಕ್ಕಿ ಬಿದ್ದಿವೆ.
ಶಿವಮೊಗ್ಗ ಭದ್ರಾವತಿಯ ಸೋಮಶೇಖರ ಬಿ ಗೋವಾದಿಂದ ಮದ್ಯ ಸಾಗಿಸುತ್ತಿದ್ದರು. ಅವರು ತಮ್ಮ ಹುಂಡೈ ಕಾರಿನಲ್ಲಿ ಮದ್ಯವನ್ನು ಹಾಕಿಕೊಂಡಿದ್ದರು. ಹೊನ್ನಾವರದ ರಾಮತೀರ್ಥ ಕ್ರಾಸಿನ ಬಳಿ ಅಬಕಾರಿ ನಿರೀಕ್ಷಕ ಶ್ರೀಧರ ಮಡಿವಾಳ ಈ ಕಾರು ತಡೆದರು.
ಚಂದ್ರಾಣಿ ಕೆರೆ ಪಕ್ಕ ನಿಂತಿದ್ದ ಕಾರನ್ನು ಅಬಕಾರಿ ಸಿಬ್ಬಂದಿ ಶ್ರೀನಿವಾಸ ಗೌಡ, ಸಯ್ಯದ ಹಮೀದ್ ಪರಿಶೀಲಿಸಿದರು. ಆಗ ಅಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 35.46 ಲೀಟರ್ ಮದ್ಯ ಸಿಕ್ಕಿ ಬಿದ್ದಿತು. ಆ ಸರಾಯಿ ಬಾಟಲಿಗಳ ಜೊತೆ ಕಾರನ್ನು ಸಹ ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದರು.