ಕಾರವಾರ: ಹಬ್ಬುವಾಡ ರಸ್ತೆಯ ಅಪಾರ್ಟಮೆಂಟಿನಿoದ ಹಾರಿ ವೃದ್ಧರೊಬ್ಬರು ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನಗಳು ಹೆಚ್ಚಿವೆ.
ಚಿನ್ನದ ವ್ಯಾಪಾರಿಯಾಗಿದ್ದ ಕೃಷ್ಣಾನಂದ ಪಾವಸ್ಕರ್ ಸರಸ್ವತಿ ವಿದ್ಯಾಮಂದಿರದ ಬಳಿಯಿರುವ ಅಪಾರ್ಟಮೆಂಟಿನಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗೆ ಅವರು ವಾಕಿಂಗ್ ಹೋಗಿ ಮನೆ ಸೇರಿದ್ದರು. ಏಕಾಂತವಾಗಿದ್ದ ಕೃಷ್ಣಾನಂದ ಪಾವಸ್ಕರ್ ಮಧ್ಯಾಹ್ನದ ವೇಳೆ ತಾವು ವಾಸವಾಗಿದ್ದ ಅಪಾರ್ಟಮೆಂಟಿನಿoದ ಕೆಳಗೆ ಬಿದ್ದಿದ್ದಾರೆ. ಅವರು ನೆಲಕ್ಕೆ ಅಪ್ಪಳಿಸಿ ಸಾವನಪ್ಪಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೇಲ್ನೋಟಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿಯಿದ್ದರೂ ಖಚಿತವಾಗಿಲ್ಲ. ಈ ವಯಸ್ಸಿನಲ್ಲಿ ಅವರು ಆತ್ಮಹತ್ಯೆ ಶರಣಾಗಲು ಕಾರಣವೇನು? ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.



