ಜೊಯಿಡಾ: ಹೊಟೇಲ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಮನೀಷ್ ವೈ ಎಂ ಅವರ ಬೈಕ್ ಕಳ್ಳತನವಾಗಿದೆ.
ದಾಂಡೇಲಿ ಟೌನ್‌ಶಿಪ್ ನೀರಿನ ಟಾಕಿ ಹತ್ತಿರ ಮನೆ ಮಾಡಿಕೊಂಡಿರುವ ಡಿ 4ರಂದು ರಾಮನಗರಕ್ಕೆ ಬಂದಿದ್ದರು. ಅಲ್ಲಿನ ಕೈಗಾರಿಕಾ ವಲಯದಲ್ಲಿರುವ ಮಾವನ ಮನೆಯಲ್ಲಿ ಅವರು ತಂಗಿದ್ದರು. ಮಾವನ ಮನೆ ಮುಂದೆ ತಮ್ಮ ಬಜಾಜ್ ಡಿಸ್ಕವರ್ ಬೈಕ್ ನಿಲ್ಲಿಸಿದ್ದರು.
ಮರುದಿನ ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊರ ಬಂದು ನೋಡಿದಾಗ ಅಲ್ಲಿ ಬೈಕ್ ಇರಲಿಲ್ಲ. ಎಲ್ಲಾ ಕಡೆ ಹುಡುಕಿದರೂ ಬೈಕ್ ಸಿಗಲಿಲ್ಲ. ಹೀಗಾಗಿ ಅವರು `ಬೈಕ್ ಹುಡುಕಿಕೊಡಿ’ ಎಂದು ಪೊಲೀಸ್ ದೂರು ನೀಡಿದ್ದಾರೆ.




