ಭಟ್ಕಳ: ಜನತಾ ಕಾಲೋನಿ ಬಳಿಯಿಂದ ರೈಲ್ವೆ ಸ್ಟೇಶನ್ ಕಡೆ ರಸ್ತೆ ದಾಡುತ್ತಿದ್ದ ಅಪರಿಚಿತನಿಗೆ ಕಾರು ಗುದ್ದಿದೆ. ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನಪ್ಪಿದ್ದು, ವಾರಸುದಾರರಿಗಾಗಿ ಹುಡುಕಾಟ ನಡೆದಿದೆ.
ಡಿಸೆಂಬರ್ 7ರ ಸಂಜೆ ಭಟ್ಕಳದಿಂದ ಹೊನ್ನಾವರ ಕಡೆ ವೇಗವಾಗಿ ಕಾರು ಓಡಿಸುತ್ತಿದ್ದ ಅಫ್ತಾಬ್ ಆಲಂ ಧಿಂಡಾ ಅಪರಿಚಿತರಿಗೆ ಕಾರು ಗುದ್ದಿದರು. ಮುರುಡೇಶ್ವರದ ನ್ಯಾಶನಲ್ ಕಾಲೋನಿ ಅಫ್ತಾಬ್ ಆಲಂ ಧಿಂಡಾ ಜನತಾ ಕಾಲೋನಿ ಬಳಿ ರಸ್ತೆ ದಾಡುತ್ತಿದ್ದವರಿಗೆ ಕಾರು ಡಿಕ್ಕಿ ಹೊಡೆದರು.
ಪರಿಣಾಮ ಕಾರಿನ ಅಡಿಗೆ ಬಿದ್ದ ಅಂದಾಜು 55 ವರ್ಷದ ಅಪರಿಚಿತ ತಲೆಗೆ ಪೆಟ್ಟು ಮಾಡಿಕೊಂಡರು. ಆಸ್ಪತ್ರೆಗೆ ಸಾಗಿಸುವದರೊಳಗೆ ಅಲ್ಲಿಯೇ ಸಾವನಪ್ಪಿದರು. ಈ ಅಪಘಾತ ನೋಡಿದ ಮಹ್ಮದ್ ಇಮ್ರಾನ್ ಶೇಖ್ ಕಾರು ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದರು.