6 Skip to content

ಶಿರಸಿಯಲ್ಲಿ ಇಂದು ಶಿಕ್ಷಕರ ಹಬ್ಬ!

ಶಿರಸಿ: ಅಖಿಲ ಹವ್ಯಕ ಮಹಾಸಭಾದಿಂದ ಶಿರಸಿಯಲ್ಲಿ ಭಾನುವಾರ (ಜೂನ್ 16) ಶಿಕ್ಷಕರ ಸಮಾವೇಶ ಆಯೋಜಿಸಲಾಗಿದೆ.
ತೋಟಗಾರ್ಸ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 7ರಿಂದ ಶುರುವಾಗಿರುವ ಕಾರ್ಯಕ್ರಮಗಳು ರಾತ್ರಿ 8ಗಂಟೆಯವರೆಗೆ ನಡೆಯಲಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯ ಹವ್ಯಕ ಶಿಕ್ಷಕ-ಶಿಕ್ಷಕಿಯರಿಗಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಉಪನ್ಯಾಸ, ಚರ್ಚೆ, ವಿವಿಧ ಸ್ಪರ್ಧೆ, ಸಾಧಕರಿಗೆ ಸನ್ಮಾನ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿದೆ.
ಶಿಕ್ಷಕರಿಗಾಗಿ ನಡೆಯುವ ಸ್ಪರ್ಧೆಗಳಾದ ಆಶುಭಾಷಣ, ಪ್ರಬಂಧ, ರಂಗೋಲಿ, ಕಸದಿಂದ ರಸ, ಸಾಂಪ್ರದಾಯಿಕ ಗೀತೆಗಳಿಗಾಗಿ ಪೈಪೋಟಿಯಿದ್ದು, ಉತ್ಸಾಹದಿಂದ ಶಿಕ್ಷಕ ವರ್ಗದವರು ಭಾಗಿಯಾಗುತ್ತಿದ್ದಾರೆ. ಸಂಜೆ 4.30ಕ್ಕೆ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ನಂತರ ಶಿಕ್ಷಕ ಬಳಗದವರೇ ಸಂಘಟಿಸಿದ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವೂ ನಡೆಯಲಿದೆ.

Leave a comment

Leave a Reply

You cannot copy content of this page