ಶಿರಸಿ: ಶಿರಸಿಯಿಂದ ಯಾಣ ಕಡೆ ಹೊರಟಿದ್ದ ಕಾರಿಗೆ ಎದುರಗಡೆಯಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ.
ಹಾವೇರಿಯ ವಿದ್ಯಾರ್ಥಿ ಹಜರೇಸಾಬ ಎಂಬಾತರು ಮಜ್ಮಿಲ್ ಮತ್ತಿಹಳ್ಳಿ ಎಂಬಾತರನ್ನು ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಯಾಣದಿಂದ ಶಿರಸಿ ಕಡೆ ಬೈಕ್ ಓಡಿಸುತ್ತಿದ್ದ ಹಜರಸಾಬ್ ಓಣಿಗದ್ದೆ ಸಮೀಪದ ತಿರುವಿನಲ್ಲಿ ಸಹ ಬೈಕಿನ ವೇಗವನ್ನು ಕಡಿಮೆ ಮಾಡಲಿಲ್ಲ. ಇದೇ ವೇಳೆ ಲಿಂಗರಾಜು ಡಿ ಎಚ್ ಎಂಬಾತರು ಶಿರಸಿ-ಯಾಣ ರಸ್ತೆಯಲ್ಲಿ ಕಾರು ಓಡಿಸಿಕೊಂಡು ಹೋಗಿದ್ದು, ಆ ಕಾರಿಗೆ ಓಣಿಗದ್ದೆ ಬಳಿ ಬೈಕ್ ಡಿಕ್ಕಿಯಾಯಿತು.
ಡಿಕ್ಕಿ ರಭಸಕ್ಕೆ ಬೈಕ್ ಜಖಂ ಆಗಿದ್ದು, ಕಾರಿನ ಒಂದು ಭಾಗಕ್ಕೆ ಹಾನಿಯಾಗಿದೆ. ಬೈಕ್ ಓಡಿಸುತ್ತಿದ್ದ ಹಜರೇಸಾಬಗೆ ಪೆಟ್ಟಾಗಿದೆ. ಬೈಕಿನ ಹಿಂದೆ ಕೂತಿದ್ದ ಮಜ್ಮಿಲ್’ನ ಸೊಂಟ ಮುರಿದಿದೆ. ಈ ಅಪಘಾತ ನೋಡಿದ ಹೆಗಡೆಕಟ್ಟಾದ ವ್ಯಾಪಾರಿ ವೆಂಕಟೇಶ ಶೇಟ್ ಪೊಲೀಸ್ ದೂರು ನೀಡಿದ್ದಾರೆ.