6 Skip to content

ಕಂಠಪೂರ್ತಿ ಕುಡಿದು ಸಾವನಪ್ಪಿದ ಕೂಲಿಯಾಳು

ಅಂಕೋಲಾ: ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಅವರ್ಸಾದ ಗಣಪತಿ ಆಗೇರ (55) ವಿಪರೀತ ಮದ್ಯ ಸೇವನೆಯಿಂದ ಸಾವನಪ್ಪಿದ್ದಾನೆ.
ಅವರ್ಸಾ ಹಾಗೂ ಸುತ್ತಮುತ್ತಲಿನ ಊರುಗಳಲ್ಲಿ ಈತ ಕೂಲಿ ಕೆಲಸ ಮಾಡಿಕೊಂಡಿದ್ದ. ಸಹವಾಸ ದೋಷದಿಂದ ಕುಡಿತದ ಚಟ ಅಂಟಿಕೊoಡಿದ್ದು. ಕ್ರಮೇಣ ಮದ್ಯ ಸೇವನೆಯನ್ನೇ ಕಾಯಕವನ್ನಾಗಿಸಿಕೊಂಡ ಆತ ಸದಾ ಹಾದಿ-ಬೀದಿಗಳಲ್ಲಿ ಬಿದ್ದಿರುತ್ತಿದ್ದ. ಇದನ್ನು ನೋಡಿದ ಪರಿಚಯಸ್ಥರು ಮನೆಗೆ ಸುದ್ದಿ ಮುಟ್ಟಿಸುತ್ತಿದ್ದರು. ನಿನ್ನೆ ರಾಜು ಶೆಟ್ಟರ ಅಂಗಡಿ ಮುಂದೆ ಬಿದ್ದುಕೊಂಡಿದ್ದ ಈತನ ಬಗ್ಗೆ ಸ್ಥಳೀಯರು ಆತನ ಅಣ್ಣನ ಮಗ ಗಿರೀಶ್ ಆಗೇರಗೆ ವಿಷಯ ತಲುಪಿಸಿದ್ದರು. ಗಿರೀಶ್ ಬಂದು ನೋಡಿದಾಗ ಗಣಪತಿ ಆಗೇರ್ ಅಂಗಡಿ ಮುಂದೆಯೇ ಸಾವನಪ್ಪಿದ್ದ.

Leave a comment

Leave a Reply

You cannot copy content of this page