6 Skip to content

ಪಾದಚಾರಿಯ ಬದುಕು ಅಂತ್ಯಗೊಳಿಸಿದ ಬೈಕ್ ಸವಾರ

ಭಟ್ಕಳ: ಮುರುಡೇಶ್ವರ ಕಡೆಗೆ ಜೋರಾಗಿ ಬೈಕ್ ಚಲಾಯಿಸಿಕೊಂಡು ಹೊರಟ ಇಸ್ಮಾಯಲ್ ಮುಲ್ಲಾ ಎಂಬಾತ ನಡೆದು ಹೋಗುತ್ತಿದ್ದ ಆನಂದ ದೇವಾಡಿಗ (46) ಎಂಬಾತರಿಗೆ ಗುದ್ದಿದ್ದು, ಆನಂದ ದೇವಾಡಿಗ ಸಾವನಪ್ಪಿದ್ದಾರೆ. ಬೈಕ್ ಓಡಿಸುತ್ತಿದ್ದ ಇಸ್ಮಾಯಲ್’ಗೆ ಸಹ ಗಾಯಗಳಾಗಿವೆ.
ಭಟ್ಕಳದಿಂದ ಮುರುಡೇಶ್ವರ ಕಡೆಗೆ ಅತಿಯಾದ ವೇಗದಲ್ಲಿ ಬೈಕ್ ಓಡಿಸುತ್ತಿದ್ದ ಇಸ್ಮಾಯಲ್ ಸಣ್ಣಭಾವಿ ಕ್ರಾಸ್ ಬಳಿ ಅಪಘಾತಕ್ಕಿಡಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಆನಂದರ ಕುಟುಂಬಕ್ಕೆ ಆಘಾತ ನೀಡಿದ್ದಾನೆ. ಬೈಕ್ ಗುದ್ದಿ ತಲೆ, ಕೈ, ಕಾಲಿಗೆ ಗಾಯ ಮಾಡಿಕೊಂಡಿದ್ದ ಆನಂದರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಿಗೆ ಕರೆದೊಯ್ಯುತ್ತಿರುವಾಗ ಆತ ಸಾವನಪ್ಪಿದ್ದಾನೆ.

Leave a comment

Leave a Reply

You cannot copy content of this page