ಜೊಯಿಡಾ: ಸರ್ಕಾರಿ ಶಾಲೆಗೆ ಮಕ್ಕಳನ್ನು ಸೆಳೆಯುವುದಕ್ಕಾಗಿ ಶಿಕ್ಷಕರೊಬ್ಬರು ವಿಶಿಷ್ಟ ಬಗೆಯ ಬ್ಯಾನರ್ ಸಿದ್ಧಪಡಿಸಿದ್ದು, ಅದು ಇದೀಗ ಎಲ್ಲಡೆ ವೈರಲ್ ಆಗಿದೆ.
ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ಮಟ್ಟಿಗೆ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯವಿದೆ ಎಂದು ಈ ಫಲಕ ಸಾರುತ್ತಿದೆ. ಕೊಂದರ ಶಾಲಾ ಆವರಣದಲ್ಲಿ ಈ ಫಲಕ ಅಳವಡಿಸಲಾಗಿದ್ದು, ಶಾಲೆಗೆ ಬಂದವರ ಗಮನ ಸೆಳೆಯುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸಹ ಮುಖ್ಯ ಶಿಕ್ಷಕ ಈರಣ್ಣ ಪಗಡಿಯವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಾರೆ. ಕೊಂದರ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿರುವುದನ್ನು ಕಂಡ ಅವರು ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಪಾಲಕರ ಮನಪರಿವರ್ತನೆ ಮಾಡಿದ್ದು, ಜೊತೆಗೆ ಸರ್ಕಾರಿ ಶಾಲೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾರೆ.
Discussion about this post