6 Skip to content

ಕಂದಕಕ್ಕೆ ಉರುಳಿದ ಓಮಿನಿ: ಸ್ಥಳೀಯರಿಂದ ಇಬ್ಬರ ರಕ್ಷಣೆ

ಶಿರಸಿ: ಕುಮಟಾದಿಂದ ಶಿರಸಿಗೆ ಹೊರಟಿದ್ದ ಮಾರುತಿ ಓಮಿನಿಗೆ ಶಿಪ್ಟ್ ಕಾರ್ ಗುದ್ದಿದ ಕಾರಣ ಓಮಿನಿ ಕಂದಕಕ್ಕೆ ಬಿದ್ದಿದ್ದು, ಅದರಲ್ಲಿ ಸಿಲುಕಿದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ರಾಮನಬೈಲ್ ಶ್ರೀರಾಮ ಕಾಲೋನಿಯ ಮರ್ಧಾನ್ ಗುಡುಮಿಯಾ ಅವಳೆಕಲ್ ಹಾಗೂ ಯಾಸಿನ್ ಎಂಬಾತರು ಓಮಿನಿಯಲ್ಲಿ ಸಂಚರಿಸುತ್ತಿದ್ದಾಗ ರಸ್ತೆ ನಡುವೆ ಇದ್ದ ಸೇತುವೆ ಬಳಿ ಈ ಅಪಘಾತ ನಡೆದಿದೆ. ಅಪಘಾತದಿಂದ ಗಾಬರಿಗೊಂಡ ಶಿಫ್ಟ್ ವಾಹನ ಚಾಲಕ ಕಾರು ನಿಲ್ಲಿಸಿದೇ ಅಲ್ಲಿಂದ ಪರಾರಿಯಾಗಿದ್ದಾನೆ. ಇದರಿಂದ ಓಮಿನಿ ಒಳಗೆ ಸಿಲುಕಿದವರು ಅಲ್ಲಿಂದಲೇ ಬೊಬ್ಬೆ ಹೊಡೆದಿದ್ದು, ಇದನ್ನು ಕೇಳಿದ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಅಪಘಾತದಿಂದ ಓಮಿನಿಗೆ ಹಾನಿಯಾಗಿದೆ. ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಪೊಲೀಸರು ಇದೀಗ ಶಿಪ್ಟ್ ಕಾರಿನವನ ಹುಡುಕಾಟದಲ್ಲಿದ್ದಾರೆ.

Leave a comment

Leave a Reply

You cannot copy content of this page