ಪಾಟ್ನಾ: ಗಂಗಾ ನದಿಯಲ್ಲಿ 17 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಪಲ್ಟಿಯಾಗಿದ್ದು, 11 ಜನ ಈಜಿ ದಡ ಸೇರಿದ್ದಾರೆ. ಉಳಿದವರಿಗಾಗಿ ಶೋಧ ನಡೆಯುತ್ತಿದೆ.
ಗಂಗಾ ದಸರಾ ನಿಮಿತ್ತ ಕೆಲವರು ಸ್ನಾನ ಮಾಡಲು ನದಿಗೆ ಅಡ್ಡಲಾಗಿ ದೋಣಿಯಲ್ಲಿ ಹೋಗುತ್ತಿದ್ದರು. ಈ ವೇಳೆ ಉಮಾ ಘಾಟ್ ಬಳಿ ದೋಣಿ ಪಲ್ಟಿಯಾಗಿದೆ. ದುರಂತದಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡ ಸ್ಥಳಕ್ಕೆ ತಲುಪಿದ್ದು, ನಾಪತ್ತೆಯಾದವರ ಹುಡುಕಾಟ ನಡೆಸಿದೆ.
Discussion about this post