6 Skip to content

ಮಲ್ಲಾಪುರ ಇದೀಗ ಬೆಳಕಿನ ಗ್ರಾಮ

ಕುಮಟಾ: ಹೊನ್ನಾವರ ತಾಲೂಕಿನ ಮಲ್ಲಾಪುರ ಗ್ರಾಮದ ಹಲವು ಕಡೆ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ.
ಇಲ್ಲಿನ ಮುಖ್ಯ ಬೀದಿ, ಸ್ಮಶಾನ, ಗುರುಪ್ರಸಾದ ಪ್ರೌಢಶಾಲೆ, ಮಲ್ಲಾಪುರದ ಆಟದ ಮೈದಾನ ಸೇರಿ 16 ಕಡೆ ಇದೀಗ ರಾತ್ರಿಯೂ ಸೂರ್ಯ ಪ್ರಕಾಶ ಹರಡುತ್ತಿದೆ. ಮಲ್ಲಾಪುರದ ಗುರುಪ್ರಸಾದ ಪ್ರೌಢಶಾಲೆ ಸಭಾಭವನದಲ್ಲಿ ಸೋಲಾರ್ ಬೀದಿದೀಪಗಳ ಉದ್ಘಾಟನಾ ಕಾರ್ಯಕ್ರಮ ನಡೆದಿದ್ದು, ಊರು ಬೆಳಗುತ್ತಿರುವುದನ್ನು ನೋಡಿ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು. ಇಂಡೋಕೋ ರೆಮೇಡಿಸ್ ಲಿಮಿಟೆಡ್’ನ ಸುಮತಿ ಸಂಗೋಪನಾ ವಿಭಾಗದ ಪ್ರಾಯೋಜಕತ್ವದಲ್ಲಿ ಭಾರತೀ ವಿಕಾಸ ಟ್ರಸ್ಟ್ ಮಣಿಪಾಲದವರು ಸೆಲ್ಕೋ ಸೋಲಾರ್ ಲೈಟ್ ಸಹಯೋಗದಲ್ಲಿ ಈ ದೀಪಗಳನ್ನು ಅಳವಡಿಸಿದ್ದಾರೆ.

Leave a comment

Leave a Reply

You cannot copy content of this page