ಕಾರವಾರ: ತೆರಿಗೆ ವಸೂಲಿ ಬಗ್ಗೆ ವಿವಿಧ ಗ್ರಾಮ ಪಂಚಾಯತದವರು ಒಂದು ದಿನದ ಅಭಿಯಾನ ನಡೆಸಿದ್ದು, ಸರ್ಕಾರಿ ಖಜಾನೆಗೆ 1.52 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ತೆರಿಗೆ ಸಂಗ್ರಹದ ಬಗ್ಗೆ ಸಭೆ ನಡೆಸಿದ್ದರು. ಹೆಚ್ಚಿನ ಪ್ರಚಾರದೊಂದಿಗೆ ಜನರ ಮನವೊಲೈಕೆಗೆ ಒತ್ತು ನೀಡುವಂತೆ ಅವರು ಸೂಚಿಸಿದ್ದರು. ಗ್ರಾ ಪಂ ಅಧ್ಯಕ್ಷ-ಉಪಾಧ್ಯಕ್ಷರ ಜೊತೆ ಸದಸ್ಯರನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದರು. ಅದರ ಪ್ರಕಾರ ಡಿ 12ರಂದು `ತೆರಿಗೆ ವಸೂಲಾತಿ ಅಭಿಯಾನ’ ನಡೆದಿದ್ದು, ಬೆಳಗ್ಗೆ 7 ಗಂಟೆಯಿAದ ಸಂಜೆ 7ರವರೆಗೆ ಅನೇಕರು ಸ್ವಯಂ ಪ್ರೇರಿತವಾಗಿ ಆಗಮಿಸಿ ತೆರಿಗೆ ಪಾವತಿಸಿದರು.
ಈ ಒಂದೇ ದಿನ 1,52,65,133 ರೂ ವಿವಿಧ ಗ್ರಾಮ ಪಂಚಾಯತ ಮೂಲಕ ಸಂಗ್ರಹವಾಗಿದೆ. ಜನರ ಮೇಲೆ ಯಾವುದೇ ಒತ್ತಡ ಹೇರದೇ, ಅವರ ಮನವೊಲೈಕೆ ಮೂಲಕ ಈ ಸಾಧನೆ ಮಾಡಲಾಗಿದೆ. ಭಾರೀ ಮೊತ್ತದಲ್ಲಿ ಸರ್ಕಾರಕ್ಕೆ ಆದಾಯ ಬಂದಿರುವುದಕ್ಕೆ ಜಿಲ್ಲಾ ಪಂಚಾಯತವೂ ಸಂತಸ ವ್ಯಕ್ತಪಡಿಸಿದೆ.