ಶಿರಸಿ: ಅರಣ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಇಬ್ಬರ ವಿರುದ್ಧ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದವರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಛೀಮಾರಿ ಹಾಕಿದೆ. ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ಮೇಲಿನ ನ್ಯಾಯಾಲಯವೂ ಎತ್ತಿ ಹಿಡಿದಿದೆ.
2016ರಲ್ಲಿ ಚೌಡಳ್ಳಿ ವಸತಿ ಗೃಹದಲ್ಲಿದ್ದ ಅರಣಕುಮಾರ ಕಾಶಿ ಅವರ ಪತ್ನಿ ಮೇಲೆ ಗೋವಿಂದ ರಾಥೋಡ ಹಾಗೂ ಶಾರದಾ ಗೋವಿಂದ ಎಂಬಾತರು ಆಕ್ರಮಣ ನಡೆಸಿದ್ದರು. ನೌಕರರ ಮೇಲೆ ನಡೆದ ದಾಳಿಯನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿತ್ತು. ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸರಕಾರಿ ಅಭಿಯೋಜಕರಾದ ರಾಜೇಶ ಎಂ ಮಳಗೀಕರ್ ತಮ್ಮ ವಾದವನ್ನ ಸಮರ್ಥವಾಗಿ ಮಂಡಿಸಿದ್ದರು. ಆರೋಪಿತರಿಗೆ ಕೆಳ ನ್ಯಾಯಾಲಯವು ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗು ತಲಾ 2500 ರೂ ದಂಡ ವಿಧಿಸಿತ್ತು. ಹಲ್ಲೆಗೆ ಒಳಗಾದವರಿಗೆ 10 ಸಾವಿರ ರೂ ಪರಿಹಾರ ನೀಡಲು ಆದೇಶ ನೀಡಿತ್ತು.
ಆದರೆ, ಇದರ ವಿರುದ್ಧ ಆರೋಪಿತರು ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಕೆಳ ನ್ಯಾಯಲಯ ನೀಡಿದ್ದ ತೀರ್ಪನ್ನು ಕಾರವಾರ ಪೀಠಾಸೀನ ಶಿರಸಿ ನ್ಯಾಯಾಧೀಶ ಕಿರಣ ಕಿಣಿ ಎತ್ತಿ ಹಿಡಿದಿದ್ದಾರೆ.