ಶಿರಸಿ: ರಾಮನಬೈಲಿನ LIC ಎಜೆಂಟ್ ಬಸಪ್ಪ ದೇವರಿ ಅವರ ಬೈಕ್ ಕದ್ದ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಒಂದು ವರ್ಷದ ನಂತರ ಪೊಲೀಸರು ಬೈಕಿನ ಜೊತೆ ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ.
2023ರ ಸೆ 8ರಂದು ಹುಬ್ಬಳ್ಳಿ ಗಾರ್ಡಪೇಟೆಯ ಪ್ರಜ್ವಲ್ ಕಿರಣ ಮಂಡಲಕರ್ (23) ಎಂಬಾತ ಹುಬ್ಬಳ್ಳಿಯಿಂದ ಶಿರಸಿಗೆ ಬಸ್ಸಿಗೆ ಬಂದಿದ್ದ. ಮರಳುವಾಗ ಬೈಕ್ ಕದ್ದು ಪರಾರಿಯಾಗಿದ್ದ. ನಗರಸಭೆ ಕಾಂಪ್ಲೆಕ್ಸ್ ಎದುರಿನ ಕಾರಂಜಿ ಬಳಿ ನಿಲ್ಲಿಸಿದ ಬೈಕ್ ಕಾಣೆಯಾದ ಬಗ್ಗೆ ಅದೇ ದಿನ ಬಸಪ್ಪ ದೇವರಿ ಪೊಲೀಸ್ ದೂರು ನೀಡಿದ್ದರು.
ಹಳೆಯ ಬಾಕಿ ಪ್ರಕರಣಗಳ ದಾಖಲೆ ಪರಿಶೀಲಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಬೈಕ್ ಕಳ್ಳತನದ ಬಗ್ಗೆ ವಿಚಾರಿಸಿದರು. ಡಿಎಸ್‌ಪಿ ಕೆ ಎಲ್ ಗಣೇಶ ಅವರಿಂದ ವರದಿ ಪಡೆದು ಸಿಪಿಆಯ್ ಶಶಿಕಾಂತ ವರ್ಮಾ ಅವರಿಗೆ ಕಳ್ಳನ ಪತ್ತೆಗೆ ಸೂಚನೆ ನೀಡಿದರು. ಪಿಎಸ್‌ಐ ಮಹಾಂತಪ್ಪ ಕಂಬಾರ, ನಾಗಪ್ಪ ಬಿ ಎ ತನಿಖೆ ನಡೆಸಿದಾಗ ಬೈಕ್ ಕಳ್ಳ ಹುಬ್ಬಳ್ಳಿಯಲ್ಲಿರುವುದು ಗೊತ್ತಾಯಿತು.
ಪೊಲೀಸ್ ಸಿಬ್ಬಂದಿ ನಾರಾಯಣ ರಾಥೋಡ, ವಿಶ್ವನಾಥ ಭಂಡಾರಿ, ಮಧುಕರ ಗಾಂವ್ಕರ್, ನಾಗಪ್ಪ ಲಮಾಣಿ, ಸದ್ದಾಂ ಹುಸೇನ್, ಮಲ್ಲಿಕಾರ್ಜುನ ಕುದುರಿ, ಮಂಜುನಾಥ ಕಾಶಿಗೋವಿ, ನಜೀರ್ ಪಿಂಜಾರ್, ಉಮೇಶ ಪೂಜಾರಿ ಹಾಗೂ ಉದಯ ಗುನಗಾ ಸೇರಿ ಹುಬ್ಬಳ್ಳಿಯಲ್ಲಿ ಅಡಗಿದ್ದ ಕಳ್ಳನನ್ನು ಹಿಡಿದರು.