6 Skip to content

ಬೈಕಿನಿಂದ ಬಿದ್ದು ಸವಾರ ಸಾವು

ಶಿರಸಿ: ಸೋಂದಾ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಭರತನಳ್ಳಿ ಸುಮಂತ ಮಹಾಬಲೆಶ್ವರ ಹೆಗಡೆ (35) ಎಂಬಾತ ಸಾವನಪ್ಪಿದ್ದಾನೆ.
ಕುಂದರಗಿ ಬಳಿಯ ಭರತನಳ್ಳಿಯಿಂದ ಜೂ 16ರಂದು ರಾತ್ರಿ ಶಿರಸಿ ಕಡೆ ಹೊರಟ ಆತ ನಂತರ ಮನೆಗೆ ಮರಳಿಲ್ಲ. ಬೆಳಗ್ಗೆ ಹುಡುಕಾಟ ನಡೆಸಿದಾಗ ಆತ ಸೋಂದಾ ಕ್ರಾಸ್ ಬಳಿ ಬೈಕಿನಿಂದ ಬಿದ್ದು ಸಾವನಪ್ಪಿರುವುದು ಗೊತ್ತಾಗಿದೆ. ತಿರುವು ಮತ್ತು ಇಳಿಜಾರು ಇದ್ದ ಪ್ರದೇಶದಲ್ಲಿ ಆತ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿದ್ದು, ತಲೆಗೆ ಪೆಟ್ಟಾಗಿ ಸಾವನಪ್ಪಿರುವುದಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a comment

Leave a Reply

You cannot copy content of this page