ಸಿದ್ದಾಪುರ: ಬಿಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿದ್ದ ಹೊಟೇಲಿನಲ್ಲಿ ಗ್ಯಾಸ್ ಸಿಲೆಂಡರ್ ಅನಿಲ ಸೋರಿಕೆಯಾಗಿದ್ದು, ಅಗ್ನಿ ಅವಘಡ ನಡೆದಿದೆ. ಮಂಗಳವಾರ ಮಧ್ಯಾಹ್ನ ನಡೆದ ಈ ಅವಘಡದಲ್ಲಿ 2 ಲಕ್ಷ ರೂ ಮೌಲ್ಯದ ಸಾಮಗ್ರಿಗಳು ಕರಕಲಾಗಿದೆ.
ಸರ್ವೋತ್ತಮ ಕೃಷ್ಣ ಭಟ್ ಅವರು ಬಿಳಗಿಯಲ್ಲಿ ಹೊಟೇಲ್ ನಡೆಸುತ್ತಿದ್ದರು. ಸಿಲೆಂಡರ್ ಪೈಪಿನಲ್ಲಿನ ರಂದ್ರದಿAದ ಅನಿಲ ಸೋರಿಕೆಯಾದ ಬಗ್ಗೆ ಮಾಹಿತಿ ಲಭಿಸಿದೆ. ಅದರ ಅರಿವಿಲ್ಲದೇ ಗ್ಯಾಸ್ ಸ್ಟೋವ್’ಗೆ ಬೆಂಕಿ ಹಚ್ಚಿದಾಗ ಇಡೀ ಹೊಟೇಲ್ ಹೊತ್ತಿ ಉರಿದಿದೆ.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಉರಿಯುತ್ತಿದ್ದ ಬೆಂಕಿಗೆ ರಭಸವಾಗಿ ನೀರು ಚುಮುಕಿಸಿದರು. ಅಷ್ಟರೊಳಗೆ ಬಹುಪಾಲು ಹೊಟೇಲ್ ಸುಟ್ಟು ಕರಕಲಾಗಿದ್ದು, ಒಳಗಿನ ಸಾಮಗ್ರಿಗಳು ಭಸ್ಮವಾಗಿದೆ.