6
  • Latest

ಯಕ್ಷಶ್ರೀ | ಗುರುವಂಶ ಚರಿತ್ರೆ ಬರೆದ ಪುರೋಹಿತ ರತ್ನ: ಜ್ಞಾನ ಧಾರೆಯೆರೆಯುವುದೇ ಈ ಭಟ್ಟರ ಕಾಯಕ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ | ಗುರುವಂಶ ಚರಿತ್ರೆ ಬರೆದ ಪುರೋಹಿತ ರತ್ನ: ಜ್ಞಾನ ಧಾರೆಯೆರೆಯುವುದೇ ಈ ಭಟ್ಟರ ಕಾಯಕ!

AchyutKumar by AchyutKumar
in ಲೇಖನ

ಯಕ್ಷಗಾನ, ತಾಳಮದ್ದಲೆಗಳಿಗೆ ಜ್ಞಾನ ಯಜ್ಞ ಎಂದೇ ಹೆಸರು. ಅದರಲ್ಲೂ ವಿಶೇಷವಾಗಿ ತಾಳಮದ್ದಲೆಗಳು ಪೌರಾಣಿಕ ಕಥಾ ಹಂದರದ ಜೊತೆಯಲ್ಲಿ ಮೌಲ್ಯ, ನೀತಿಗಳನ್ನು ಹೆಚ್ಚಾಗಿ ಸಾರುತ್ತವೆ. ತಾಳಮದ್ದಲೆಗಳು ಜ್ಞಾನ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವಲ್ಲಿ ವೇದ-ಶಾಸ್ತ್ರಾದಿಗಳನ್ನು ಅಧ್ಯಯನ ಮಾಡಿದ ವಿದ್ವಾಂಸರ ಅರ್ಥಗಾರಿಕೆ ಮಹತ್ವದ ಪಾತ್ರವಹಿಸಿದೆ. ಅಂತಹ ವಿದ್ವಾಂಸರಲ್ಲಿ ಯಲ್ಲಾಪುರ ತಾಲೂಕಿನ ಬಾಲಿಗದ್ದೆಯ ತಿಮ್ಮಣ್ಣ ರಾಮಕೃಷ್ಣ ಭಟ್ಟರು ಒಬ್ಬರು.

ADVERTISEMENT

ನಂದೊಳ್ಳಿ ಶಾಲೆಯಲ್ಲಿ 5ನೇ ತರಗತಿವರೆಗೆ ಅಭ್ಯಾಸ ಮಾಡಿದ ಭಟ್ಟರು ಮನೆತನದ ಪರಂಪರೆಯ ಪೌರೋಹಿತ್ಯ, ಶಾಸ್ತ್ರ ಅಧ್ಯಯನ ಮುಂದುವರಿಸುವ ನಿಟ್ಟಿನಲ್ಲಿ ನೆಲೆಮಾವ ಮಠ ಸೇರಿದರು. ಅಲ್ಲಿ ಸೂರಿ ರಾಮಚಂದ್ರ ಶಾಸ್ತ್ರಿಗಳಲ್ಲಿ 8 ವರ್ಷಗಳ ಕಾಲ ಸಂಸ್ಕೃತ, ವೇದ, ಜ್ಯೋತಿಷ್ಯದ ಜೊತೆಗೆ ಪ್ರಮುಖವಾಗಿ ವೇದಾಂತ ಶಾಸ್ತ್ರ, ಧರ್ಮಶಾಸ್ತ್ರ ಓದಿದರು. ಇತರ ಶಾಸ್ತ್ರಗಳ ಬಗೆಗೂ ಅಧ್ಯಯನ ಮಾಡಿದರು. ನಂತರ ಶಾಸ್ತ್ರಿಗಳು ಅಲ್ಲಿಂದ ಹೊನ್ನಾವರದ ಕವಲಕ್ಕಿಗೆ ಹೋದಾಗ 2 ವರ್ಷ ಅಲ್ಲಿ ಉಳಿದು ಹೆಚ್ಚಿನ ಅಧ್ಯಯನ ಮಾಡಿದರು. 10 ವರ್ಷಗಳ ಅಧ್ಯಯನದ ನಂತರ ಮನೆಗೆ ಮರಳಿ, ಪೌರೋಹಿತ್ಯದಲ್ಲಿ ತೊಡಗಿಸಿಕೊಂಡರು. ಮನೆತನದ ಹಿರಿಯರಾದ ದೊಡ್ಡ ತಿಮ್ಮಣ್ಣ ಭಟ್ಟರ ಪ್ರೇರಣೆಯಿಂದ ತಾಳಮದ್ದಲೆ ಅರ್ಥಗಾರಿಕೆಯಲ್ಲಿ ಆಸಕ್ತಿ ಮೂಡಿತು. ಆ ಕಾಲದಲ್ಲಿ ವೈದಿಕರೆಲ್ಲ ತಾಳಮದ್ದಲೆ ಅರ್ಥ ಹೇಳುವ ರೂಢಿಯೂ ಇತ್ತು. ಅದರಂತೆ ಸಮೀಪದ ತಟ್ಟಿಗದ್ದೆಯಲ್ಲಿ ಸುಭದ್ರಾ ಕಲ್ಯಾಣದ ಬಲರಾಮನ ಪಾತ್ರದೊಂದಿಗೆ ತಿಮ್ಮಣ್ಣ ಭಟ್ಟರ ರಂಗ ಪ್ರವೇಶವಾಯಿತು.

ಅಧ್ಯಯನದ ಬಲ, ಪ್ರಸಂಗಗಳ ಜ್ಞಾನದ ಜೊತೆ, ದೊಡ್ಡ ತಿಮ್ಮಣ್ಣ ಭಟ್ಟರ ಮಾರ್ಗದರ್ಶನ ದೊರೆತು ಅರ್ಥಗಾರಿಕೆಯಲ್ಲಿ ಪಳಗತೊಡಗಿದರು. ರುಕ್ಮಾಂಗದ ಚರಿತ್ರೆಯ ರುಕ್ಮಾಂಗದ, ಸಂಧಾನದ ಕೌರವ, ಕೃಷ್ಣ, ಕರ್ಣಪರ್ವದ ಕರ್ಣ, ಶಲ್ಯ, ಭೀಷ್ಮಾರ್ಜುನದ ಭೀಷ್ಮ, ಕೃಷ್ಣ, ಪಟ್ಟಾಭಿಷೇಕದ ಭರತ, ಕಾಲನೇಮಿ ಕಾಳಗದ ರಾವಣ ಹೀಗೆ ಭಟ್ಟರ ಅನೇಕ ಪಾತ್ರಗಳು ಜನಮೆಚ್ಚುಗೆಗೆ ಪಾತ್ರವಾದವು. ಯಲ್ಲಾಪುರ ತಾಲೂಕಿನ ಹಲವೆಡೆ 4 ದಶಕಗಳಿಗೂ ಹೆಚ್ಚು ಕಾಲ ತಾಳಮದ್ದಲೆಗಳಲ್ಲಿ ಭಾಗವಹಿಸಿದ್ದಾರೆ. ಆ ಕಾಲದಲ್ಲಿ ಬೆಳಖಂಡ ದೇವ ಭಟ್ಟರು, ಮೊಟ್ಟೆಗದ್ದೆ ವೆಂಕಟರಮಣ ಭಟ್ಟರು, ಸೂಳಗಾರ ತಿಮ್ಮಣ್ಣ ಭಟ್ಟರು, ತಾರೀಮಕ್ಕಿ ರಾಮಚಂದ್ರ ಭಟ್ಟರು, ಜವಳೆಕೆರೆ ನರಸಿಂಹ ಭಟ್ಟರು, ಚಿನ್ಮನೆ ನಾಗ ಹೆಗಡೆಯವರು, ನಂದೊಳ್ಳಿ ಕೃಷ್ಣ ಭಾಗ್ವತರು, ಕಾರಕುಂಕಿ ರಾಮ ಭಟ್ಟರು, ಗೋಳಿಗದ್ದೆ ಮಹಾಬಲೇಶ್ವರ ಭಾಗ್ವತರು, ಸಣ್ಣಣ್ಣ ಭಾಗ್ವತರು, ಶಿಂಬಳಗಾರ ವಿಶ್ವ ಭಟ್ಟರು ಮುಂತಾದ ಕಲಾವಿದರೊಂದಿಗೆ ಅನೇಕ ತಾಳಮದ್ದಲೆಗಳಲ್ಲಿ ತಿಮ್ಮಣ್ಣ ಭಟ್ಟರು ಭಾಗವಹಿಸಿದ್ದಾರೆ. ಅದರಲ್ಲೂ ಬಾಲಿಗದ್ದೆ ತಿಮ್ಮಣ್ಣ ಭಟ್ಟ ದ್ವಯರ ಅರ್ಥಗಾರಿಕೆ ವಿಶೇಷ ಪ್ರಸಿದ್ಧಿ ಪಡೆದಿತ್ತು. ಇವರ ರುಕ್ಮಾಂಗದ-ಮೋಹಿನಿ, ಕರ್ಣ-ಶಲ್ಯ, ಕೃಷ್ಣ-ಕೌರವ, ಸತ್ಯವಾನ-ಸಾವಿತ್ರಿ ಇಂತಹ ಜೋಡಿ ಪಾತ್ರಗಳಿಗಾಗಿಯೇ ತಾಳಮದ್ದಲೆಗಳು ಆಯೋಜನೆಗೊಳ್ಳುತ್ತಿದ್ದುದು ವಿಶೇಷ.

Advertisement. Scroll to continue reading.

ಒಮ್ಮೆ ಬಾಲಿಗದ್ದೆಯ ಮನೆಯಂಗಳದಲ್ಲಿ ಪಟ್ಟಾಭಿಷೇಕ-ಭರತಾಗಮನ ತಾಳಮದ್ದಲೆ ಇತ್ತು. ತಿಮ್ಮಣ್ಣ ಭಟ್ಟರು ಭರತನ ಪಾತ್ರವನ್ನು ನಿರ್ವಹಿಸಿದ್ದರು. ಅಂದು ಭಟ್ಟರ ಅರ್ಥ ಕೇಳಿ ಗುರುಗಳಾದ ಸೂರಿ ರಾಮಚಂದ್ರ ಶಾಸ್ತ್ರಿಗಳು `ಚೆನ್ನಾಗಿ ಪಾತ್ರ ನಿರ್ವಹಿಸಿದೆ’ ಎಂದು ಬೆನ್ನು ತಟ್ಟಿದ ಕ್ಷಣವನ್ನು ಸಂತೋಷದಿoದ ಸ್ಮರಿಸಿಕೊಳ್ಳುತ್ತಾರೆ. ದೊಡ್ಡ ತಿಮ್ಮಣ್ಣ ಭಟ್ಟರ ನಿಧನದ ನಂತರ ಈ ತಿಮ್ಮಣ್ಣ ಭಟ್ಟರೂ ಅರ್ಥಗಾರಿಕೆಯನ್ನು ನಿಲ್ಲಿಸಿದರು. ಆದರೆ ತಾಳಮದ್ದಲೆ, ಯಕ್ಷಗಾನದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಧರ್ಮಶಾಸ್ತ್ರ, ಸಾಹಿತ್ಯದ ವಿಭಾಗದಲ್ಲಿ ತಿಮ್ಮಣ್ಣ ಭಟ್ಟರ ಸಾಧನೆ ಅಪಾರ. ಸ್ವರ್ಣವಲ್ಲಿಯ ಗುರು ಪರಂಪರೆಯ ಕುರಿತು ಸಂಸ್ಕೃತದಲ್ಲಿ 800 ಶ್ಲೋಕಗಳುಳ್ಳ `ಗುರುವಂಶ ಚರಿತ್ರೆ’ ಎಂಬ ಕೃತಿ ರಚಿಸಿದ್ದಾರೆ. ನಂತರ ಅದರ ಕನ್ನಡ ತಾತ್ಪರ್ಯವನ್ನೂ ಬರೆದಿದ್ದಾರೆ. ಸ್ವರ್ಣವಲ್ಲೀ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿಗಳ ಸೂಚನೆಯಂತೆ `ಅಶೌಚ ನಿರ್ಣಯ’ ಎಂಬ ಧರ್ಮಶಾಸ್ತ್ರದ ಗ್ರಂಥವನ್ನು ಆಧಾರಸಹಿತವಾಗಿ ಬರೆದಿದ್ದಾರೆ. ಇದು ಅಶೌಚದ ಕುರಿತು ಸಂಪೂರ್ಣ ಮಾಹಿತಿಗಳನ್ನು ಆಧಾರ ಸಹಿತವಾಗಿ ನೀಡುವ ಸಮರ್ಥ ಗ್ರಂಥವಾಗಿ ನಿಂತಿದೆ. ಅನೇಕ ವಿದ್ವತ್, ಧರ್ಮಶಾಸ್ತ್ರಗಳ ಕುರಿತಾದ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.

Advertisement. Scroll to continue reading.

ತಿಮ್ಮಣ್ಣ ಭಟ್ಟರ ವಿದ್ವತ್ತಿಗೆ ಕಾಂಚಿ ಶ್ರೀಗಳು, ಸ್ವರ್ಣವಲ್ಲೀ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರಿಂದ ಆಶೀರ್ವಾದಪೂರ್ವಕ ಸನ್ಮಾನಗಳು ದೊರೆತಿವೆ. ಸ್ವರ್ಣವಲ್ಲೀ ಶ್ರೀಗಳು `ಪುರೋಹಿತ ರತ್ನ’ ಎಂಬ ಬಿರುದು ನೀಡಿ ಆಶೀರ್ವದಿಸಿದ್ದಾರೆ. 90ರ ಆಸುಪಾಸಿನ ವಯಸ್ಸಿನಲ್ಲೂ ಉತ್ಸಾಹದಿಂದ ತಮ್ಮ ಜ್ಞಾನವನ್ನು ಆಸಕ್ತರಿಗೆ ಧಾರೆ ಎರೆಯುತ್ತ ಆದರ್ಶರಾಗಿದ್ದಾರೆ.

– ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ.

Previous Post

ಶಿರಸಿಯ ಪೋರನಿಗೆ ಪ್ರಧಾನಿ ರ‍್ಯಾಲಿಗೆ ಆಹ್ವಾನ

Next Post

PSI ಪರೀಕ್ಷೆ: ಮೂವರ ಬದುಕು ಬದಲಿಸಿದ ಶ್ರೀರಾಮ

Next Post

PSI ಪರೀಕ್ಷೆ: ಮೂವರ ಬದುಕು ಬದಲಿಸಿದ ಶ್ರೀರಾಮ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ