ಅಂಕೋಲಾ: ಕಳೆದ ವಾರ ಪ್ರಕಟಗೊಂಡ ಪಿಎಸ್‌ಐ ಆಯ್ಕೆ ಫಲಿತಾಂಶದಲ್ಲಿ ಶ್ರೀರಾಮ ಸ್ಟಡಿ ಸರ್ಕಲ್’ನ ಮೂವರು ಅಭ್ಯರ್ಥಿಗಳು ಮಹತ್ವದ ಸಾಧನೆ ಮಾಡಿದ್ದಾರೆ.
ಕುಮಟಾದ ಸ್ವಾತಿ ಗೌಡ ಅವರು ಶ್ರೀರಾಮ ಸ್ಟಡಿ ಸರ್ಕಲ್’ನಲ್ಲಿ ಎಂಟು ತಿಂಗಳ ತರಬೇತಿ ಪಡೆದಿದ್ದರು. ಅವರು ಪಿಎಸ್‌ಐ ಪರೀಕ್ಷೆಯಲ್ಲಿ 25ನೇ ರ‍್ಯಾಂಕ್ ಪಡೆದಿದ್ದಾರೆ. ಅಗಸೂರಿನ ಸಂಜಯ ನಾಯಕ ಅವರು ಕೆಎಎಸ್ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದು, ಅವರು ಕೆಪಿಎಸ್‌ಸಿ ಸ್ಟಾಟಿಸ್ಟಿಕಲ್ ಇನ್‌ಸ್ಪೆಕ್ಟರ್ ಪರೀಕ್ಷೆಯಲ್ಲಿ 51ನೇ ರ‍್ಯಾಂಕ್ ಪಡೆದರು.
ಇನ್ನೂ ಶ್ರೀರಾಮ ಸ್ಟಡಿ ಸರ್ಕಲ್’ನಲ್ಲಿ ಐದು ತಿಂಗಳು ಅಧ್ಯಯನ ನಡೆಸಿದ ಸುಮಂತ ನಾಯ್ಕ ಅವರು ಪಿಎಸ್‌ಐ ಪರೀಕ್ಷೆಯಲ್ಲಿ 58ನೇ ರ‍್ಯಾಂಕ್ ಪಡೆದರು. ಸುಮಂತ ನಾಯ್ಕ ಅವರು ಈಗಾಗಲೇ ಪೊಲೀಸರಾಗಿ ಸೇವೆ ಸಲ್ಲಿಸುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ನಾಲ್ಕು ಹುದ್ದೆಗಳಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ. ಪ್ರಸ್ತುತ ಇನ್ನೊಂದು ಪರೀಕ್ಷೆ ಎದುರಿಸಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದಾರೆ.
ಈ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀರಾಮ ಸ್ಟಡಿ ಸರ್ಕಲ್’ಮ ಸೂರಜ ನಾಯಕ ತರಬೇತಿ ನೀಡಿದ್ದರು. ಅಭ್ಯರ್ಥಿಗಳ ಸಾಧನೆ ನೋಡಿ ಅವರು ಸಂತಸ ವ್ಯಕ್ತಪಡಿಸಿದರು.