6 Skip to content

ಪ್ರವಾಸಿಗರಿಗೆ ಗುದ್ದಿದ ಲಾರಿ: ಮಕ್ಕಳು ಸೇರಿ 8 ಜನರಿಗೆ ಗಾಯ

ಹೊನ್ನಾವರ: ಬಳ್ಳಾರಿ ಶಿರಗೊಪ್ಪದಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಬ್ಯಾಂಕ್ ಉದ್ಯೋಗಿ ಹಾಗೂ ಅವರ ಕುಟುಂಬದವರು ಚಲಿಸುತ್ತಿದ್ದ ಟೇಂಪೋಗೆ ಲಾರಿ ಗುದ್ದಿದ್ದು, ಮೂವರು ಮಕ್ಕಳು ಸೇರಿ ಎಂಟು ಜನ ಗಾಯಗೊಂಡಿದ್ದಾರೆ.
ಆoದ್ರದ ಕರ್ನೂಲ್ ಜಿಲ್ಲೆಯವರಾದ, ಪ್ರಸ್ತುತ ಬಳ್ಳಾರಿಯ ಶಿರಗುಪ್ಪದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಉದ್ಯೋಗಿಯಾಗಿರುವ ಜಯಪ್ರಕಾಶ ಪ್ರಹ್ಲಾದ್ (34) ಎಂಬಾತರು ತಮ್ಮ ಕುಟುಂಬದೊoದಿಗೆ ಕರಾವಳಿ ಪ್ರದೇಶಗಳನ್ನು ನೋಡಲು ಆಗಮಿಸಿದ್ದರು. ಇಡೀ ದಿನ ಸುತ್ತಾಡಿದ ಅವರು ಸಂಜೆ ಮುರುಡೇಶ್ವರಕ್ಕೆ ತೆರಳಿದ್ದು, ಅಲ್ಲಿಂದ ಊರಿಗೆ ಮರಳುವಾಗ ಹೊನ್ನಾವರದ ಎಮ್ಮೆಪೈಲ್ ತಿರುವಿನಲ್ಲಿ ಲಾರಿಯೊಂದು ಇವರ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ. ನಂತರ ಲಾರಿ ಚಾಲಕ ಲಾರಿಸಹಿತ ಅಲ್ಲಿಂದ ಪರಾರಿಯಾಗಿದ್ದು, ಜಯ ಪ್ರಕಾಶ ಅವರ ಪುತ್ರ ಹಾರ್ಧಿಕ್ (6ವರ್ಷ) ಪುತ್ರಿ ಭವಿಷ್ಯ (8ವರ್ಷ) ಹಾಗೂ ಸಂಬoಧಿ ದಿನೇಶನಾಗ ಅನಿಲ ಗಾಂವ್ಕರ್ (10 ವರ್ಷ) ಇವರನ್ನು ಸೇರಿ ಎಂಟು ಜನ ಗಾಯಗೊಂಡಿದ್ದಾರೆ. ಟೆಂಪೋ ಓಡಿಸುತ್ತಿದ್ದ ಚಾಲಕ ಗುರುಪಾದ ಸ್ವಾಮಿ ಅವರ ಬಾಯಿ, ತುಟಿ, ಮುಖ ಒಡೆದಿದೆ. ಜಯಪ್ರಕಾಶ ಅವರ ಕೈ-ಕಾಲುಗಳಿಗೆ ಗಾಯವಾಗಿದೆ.

 

 

Leave a comment

Leave a Reply

You cannot copy content of this page