ಎಪಿಎಂಸಿಯ ಅಡಿಕೆ ಭವನದಲ್ಲಿ ಆಯೋಜಿಸಿದ ‘ಸಂಸದರಿಗೆ ಅಭಿನಂದನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ವಿ ಪ ಸದಸ್ಯ ಶಾಂತರಾಮ ಸಿದ್ದಿ ‘ಯಲ್ಲಾಪುರದಲ್ಲಿ ಬಿಜೆಪಿ ಶಾಸಕರು ಇದ್ದಾರೆ ಎಂದು ನಾವು ಅಂದಿಕೊಂಡಿದ್ದೇವು. ಆದರೆ, ಇಲ್ಲಿ ಶಾಸಕರೇ ಇಲ್ಲ’ ಎಂದು ಶಿವರಾಮ ಹೆಬ್ಬಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಕುರಿತು ಮಾತನಾಡಿದ ಅವರು, ‘ಶಾಸಕರಿಂದ ಆಗಬೇಕಾದ ಕೆಲಸಗಳಿಗೂ ಜನ ಸಂಸದರಿಗೆ ಮನವಿ ನೀಡುತ್ತಿದ್ದಾರೆ. ಇಲ್ಲಿ ಆಗಮಿಸಿ ಜನ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಇಲ್ಲಿ ಶಾಸಕರು ಇಲ್ಲ ಎಂಬಂತಾಗಿದೆ’ ಎಂದರು.
ಬಿಜೆಪಿ ನಾಯಕ ಎಲ್ ಟಿ ಪಾಟೀಲ ಸಹ ಶಿವರಾಮ ಹೆಬ್ಬಾರ್ ವಿರುದ್ಧ ವಾಗ್ದಾಳಿ ನಡೆಸಿದರು. ‘ಶಾಸಕರ ಪುತ್ರ ದುಡ್ಡು, ಅಧಿಕಾರ ಹಾಗೂ ಕೆಲಸದ ಆಮೀಷ ಒಡ್ಡಿದರೂ ಬಿಜೆಪಿಗರು ಬದಲಾಗಿಲ್ಲ’ ಎಂದರು.
ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.
Discussion about this post