6
  • Latest

ಕಲಿಕೆಗೆ ಇಲ್ಲ ಬಡತನದ ಹಂಗು: ಉಚಿತ ಶಿಕ್ಷಣ.. ಖಚಿತ ಶಿಷ್ಯ ವೇತನ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಕಲಿಕೆಗೆ ಇಲ್ಲ ಬಡತನದ ಹಂಗು: ಉಚಿತ ಶಿಕ್ಷಣ.. ಖಚಿತ ಶಿಷ್ಯ ವೇತನ!

AchyutKumar by AchyutKumar
in ರಾಜ್ಯ

ಕುಮಟಾ: ಸಂಸ್ಕಾರಯುತ ಶಿಕ್ಷಣದ ಮೂಲಕ ಜಿಲ್ಲೆಯ ಪ್ರತಿಭೆಗಳನ್ನು ರಾಜ್ಯ-ರಾಷ್ಟ್ರಮಟ್ಟದ ಸಾಧನೆಗೆ ಪ್ರೇರೇಪಿಸುತ್ತಿರುವ ಮಂಗಳೂರಿನ ವಿಧಾತ್ರಿ ಅಕಾಡೆಮಿ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಜೊತೆ ಕೈ ಜೋಡಿಸಿ ನಾಲ್ಕು ವರ್ಷ ಕಳೆದಿದೆ. ಐದನೇ ವರ್ಷದ ಸಡಗರದಲ್ಲಿರುವ ಈ ಸಂಸ್ಥೆ ಇದೀಗ `ಪ್ರತಿಭಾ ಸ್ಪಂದನ’ ಕಾರ್ಯಕ್ರಮಕ್ಕೆ ಅಣಿಯಾಗಿದೆ. ಆ ಮೂಲಕ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಯೋಜನೆಯೊಂದನ್ನು ಸಂಸ್ಥೆ ಪರಿಚಯಿಸಿದೆ.

ಭಾರತೀಯ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸರಸ್ವತಿ ಪಿಯು ಕಾಲೇಜು ಮುಂಚೂಣಿಯಲ್ಲಿದೆ. ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆ ಜೊತೆ ಕಲಿಯುವ ಉತ್ಸಾಹವಿರುವ ಬಡ ಪ್ರತಿಭಾನ್ವಿತ 10 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸಂಸ್ಥೆ ಮುಂದಾಗಿದೆ. ಇದರೊಂದಿಗೆ 15 ಪ್ರತಿಭಾನ್ವಿತರಿಗೆ ಶಿಷ್ಯ ವೇತನ ನೀಡುವ ಬಗ್ಗೆಯೂ ವಿಧಾತ್ರಿಯ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿ ಘೋಷಿಸಿದ್ದಾರೆ.

`ಪ್ರತಿಭಾ ಸ್ಪಂದನ ಯೋಜನೆ ಅಡಿ ಶೈಕ್ಷಣಿಕವಾಗಿ ಸಾಧನೆ ಮಾಡಿದ 6 ವಿದ್ಯಾರ್ಥಿಗಳ ಜೊತೆ ಸಾಂಸ್ಕೃತಿಕ ಸಾಧನೆ ಮಾಡಿದ 2 ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರಿಗೆ ಉಚಿತ ಶಿಕ್ಷಣ ಸಿಗಲಿದೆ. ಅತಿ ಹೆಚ್ಚು ಅಂಕಪಡೆದು ಸಾಧನೆ ಮಾಡಿದ 15 ವಿದ್ಯಾರ್ಥಿಗಳಿಗೆ ಯಾವುದೇ ನಿರ್ಭಂಧಗಳನ್ನು ವಿಧಿಸದೇ ಶಿಷ್ಯ ವೇತನ ಒದಗಿಸಲು ಈ ಸಂಸ್ಥೆ ಮುಂದಾಗಿದೆ. ಎಲ್ಲಾ ಸ್ಥರ ಹಾಗೂ ಎಲ್ಲಾ ವರ್ಗದವರು ಸಹ ಈ ಯೋಜನೆಗೆ ಹೆಸರು ನೊಂದಾಯಿಸಿ, ಲಿಖಿತ ಪರೀಕ್ಷೆ ಎದುರಿಸಲು ಮುಕ್ತ ಅವಕಾಶವಿದೆ’ ಎಂದು ಗುರುರಾಜ ಶೆಟ್ಟಿ ವಿವರಿಸಿದರು.

ಉಚಿತ ಶಿಕ್ಷಣ ಹಾಗೂ ಶಿಷ್ಯ ವೇತನದ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಗುರುರಾಜ ಶೆಟ್ಟಿ

`ಹೆಸರು ನೊಂದಾಯಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜನವರಿ 12ರ ಬೆಳಗ್ಗೆ 11.30ಕ್ಕೆ ಕುಮಟಾದ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಸಂದರ್ಶನ ಹಾಗೂ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗೆ ಬರುವವರಿಗೆ ಕುಮಟಾ ಬಸ್ ನಿಲ್ದಾಣದಿಂದ ಕಾಲೇಜಿನವರೆಗೂ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಮಧ್ಯಾಹ್ನ ಊಟವನ್ನು ಸಹ ಸಂಸ್ಥೆಯೇ ನೀಡುತ್ತದೆ. ಪರೀಕ್ಷೆ ಎದುರಿಸಿದ ನಂತರ ಉಚಿತ ಶಿಕ್ಷಣಕ್ಕೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ’ ಎಂದು ಪ್ರಾಚಾರ್ಯ ಕಿರಣ ಭಟ್ಟ ಮಾಹಿತಿ ನೀಡಿದರು.

ಇನ್ನೂ `ಶಿಷ್ಯವೇತನ ಬಯಸುವ ವಿದ್ಯಾರ್ಥಿಗಳು ಸಹ ಲಿಖಿತ ಪರೀಕ್ಷೆ ಎದುರಿಸಬೇಕು. ಇದಕ್ಕಾಗಿ ಗೂಗಲ್ ಪಾರಂ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದ ಪ್ರಶ್ನೆಗಳಿರುತ್ತವೆ. 100 ಅಂಕದ ಪರೀಕ್ಷೆಯಲ್ಲಿ 50 ಅಂಕದ ಬಹು ಆಯ್ಕೆ ಹಾಗೂ ಉಳಿದ 50 ಅಂಕಕ್ಕೆ ವಿಸ್ತೃತ ಉತ್ತರ ಬರೆಯುವ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಸಂಯೋಜಿಸಲಾಗಿದೆ’ ಎಂದವರು ತಿಳಿಸಿದರು. ಉಪನ್ಯಾಸಕ ಚಿದಾನಂದ ಭಂಡಾರಿ ಅವರು ಈ ವೇಳೆ ಇದ್ದರು.

ಗೂಗಲ್ ಪಾರಂ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: ಪ್ರತಿಭಾ ಸ್ಪಂದನ ಅರ್ಜಿ

ಆರ್ಥಿಕವಾಗಿ ಸಬಲರಲ್ಲದವರು ಪೂರಕ ದಾಖಲೆಗಳನ್ನು ಒದಗಿಸಬೇಕು. ಸಾಂಸ್ಕೃತಿಕ ಹಾಗೂ ಕ್ರೀಡಾ ಸಾಧಕರು ಅಗತ್ಯ ದಾಖಲೆ ಒದಗಿಸಬೇಕು. ಇದನ್ನು ಹೊರತುಪಡಿಸಿ ಯಾವುದೇ ಶಿಫಾರಸ್ಸುಗಳನ್ನು ಇಲ್ಲಿ ಪರಿಗಣಿಸುವುದಿಲ್ಲ.

ಇನ್ನೂ ಈ ವಿಷಯದ ಬಗ್ಗೆ ಗೊಂದಲವೇ? ಹಾಗಾದರೆ ಇಲ್ಲಿ ಫೋನ್ ಮಾಡಿ: 9972663855, 9972664155

ShareSendTweetShare
Previous Post

ನಮೋ ನಮಃ | ಒಂದೇ ವೇದಿಕೆಯಲ್ಲಿ ತ್ರಿಮೂರ್ತಿ ದರ್ಶನ: ಯಲ್ಲಾಪುರದಲ್ಲಿ ಮೊಳಗಿದ ಗೀತಾ ಸಾರ!

Next Post

ಪತ್ನಿ ಜೊತೆ ಮುನಿಸು | ನೇಣಿಗೆ ಶರಣಾದ ಗುಜುರಿ ವ್ಯಾಪಾರಿ!

Next Post

ಪತ್ನಿ ಜೊತೆ ಮುನಿಸು | ನೇಣಿಗೆ ಶರಣಾದ ಗುಜುರಿ ವ್ಯಾಪಾರಿ!

ಕೇಂದ್ರದ ಯೋಜನೆ | ಅನುಷ್ಠಾನ ಅಧಿಕಾರಿಗಳಿಗೆ ಇಲ್ಲ ಆಸಕ್ತಿ!

ಒಂಟಿ ಪ್ರತಿಭಟನೆ: ನೀರಿಗಾಗಿ ನಡೆದ ಉಪವಾಸ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.