ಕಾರವಾರ: ಜಗದ್ಗುರು ನರೇಂದ್ರಾಚಾರ್ಯ ಮಹಾರಾಜ ಸಂಸ್ಥಾನದಿoದ ಭಾನುವಾರ ದೇಶದ 248 ಕಡೆ ರಕ್ತದಾನ ಶಿಬಿರ ನಡೆದಿದೆ. ಕಾರವಾರದ ಮಹಾಸತಿ ಕಲ್ಯಾಣ ಮಂಟಪದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 56 ಜನ ಸ್ವಯಂ ಪ್ರೇರಣೆಯಿಂದ ಆಗಮಿಸಿ ರಕ್ತದಾನ ಮಾಡಿದರು.
ನರೇಂದ್ರಾಚಾರ್ಯ ಸ್ವಾಮಿ ಭಕ್ತರೆಲ್ಲರೂ ಸೇರಿ ಈ ಶಿಬಿರ ಆಯೋಜಿಸಿದ್ದು, ಬಿ ಮತ್ತು ಒ ಪಾಸಿಟಿವ್ ಗುಂಪಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. `ರಕ್ತದಾನದ ಮೂಲಕ ಇನ್ನೊಬ್ಬರ ಜೀವ ಉಳಿಸುವ ಅವಕಾಶ ನಮಗೆಲ್ಲರಿಗೂ ಸಿಕ್ಕಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು’ ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಕರೆ ನೀಡಿದರು. `ಭೂಮಿ ಮೇಲೆ ಯಾರೂ ಇಂಥಹುದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಜನಿಸಿರುವುದಿಲ್ಲ. ರಕ್ತದ ಗುಂಪುಗಳು ಬೇರೆ ಇದ್ದರೂ ಅದರ ಬಣ್ಣವೂ ಒಂದೇ. ನಮ್ಮ ಗುಣ ಧರ್ಮಗಳು ಬೇರೆ ಬೇರೆ ಇದ್ದರೂ ನಾವೆಲ್ಲರೂ ಮಾನವ ಜಾತಿಯವರು’ ಎಂದವರು ಹೇಳಿದರು.

ರಕ್ತದಾನದಿಂದ ಆರೋಗ್ಯ ವೃದ್ಧಿ
`ಆರೋಗ್ಯವಂತರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತವನ್ನು ದಾನ ಮಾಡಬಹುದು. ರಕ್ತ ಕೊಡುವುದರಿಂದ ನಿಶ್ಯಕ್ತಿ ಆಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕು. ರಕ್ತದಾನದಿಂದ ದೇಹದಲ್ಲಿ ರಕ್ತದ ಜೊತೆ ಆರೋಗ್ಯವೂ ವೃದ್ಧಿಯಾಗುತ್ತದೆ’ ಎಂದರು. `ಜ 18ರಂದು ಸದಾಶಿವಗಡದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಹೆಚ್ಚಿನ ಜನ ಈ ಶಿಬಿರದಲ್ಲಿ ಭಾಗವಹಿಸಬೇಕು’ ಎಂದು ಮಾಧವ ನಾಯಕ ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥಾನದ ಗೋವಾ ನಿರೀಕ್ಷಕ ಸೂರಜ್ ಕೆಂಕ್ರೆ, ಅಧ್ಯಕ್ಷ ದೀಪಕ್ ವರ್ಣೇಕರ್, ಜಿಲ್ಲಾ ಕಾರ್ಯದರ್ಶಿ ನಯನಬಾಬು ಕಾನಕೋನಕರ್, ತಾಲೂಕ ಅಧ್ಯಕ್ಷ ಅರುಣ್ ರಾಣೆ, ಅಪ್ಪಣ್ಣ ಕುಡ್ತಲಕರ್, ತುಳಸಿದಾಸ್ ರಾಯ್ಕರ್, ದೀಪಾಲಿ ಕಾರ್ವರ್ಕರ್, ಅಕ್ಷತಾ ಖೋಬ್ರೇಕರ್ ಇತರರು ಇದ್ದರು.
ರಕ್ತದಾನದ ಮಹತ್ವದ ಬಗ್ಗೆ ಮಾಧವ ನಾಯಕರು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..