ಭಟ್ಕಳ: ಗ್ಯಾಸ್ ಸೋರಿಕೆ ದೂರು ಆಧರಿಸಿ ಅದರ ತಪಾಸಣೆ ಹಾಗೂ ದುರಸ್ಥಿಗೆ ಆಗಮಿಸಿದ್ದ ರಾಜುರಾಮ ಎಂಬಾತರ ಮೈಗೆ ಬೆಂಕಿ ತಗುಲಿದೆ. ಸುಟ್ಟ ಗಾಯದ ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಟ್ಕಳದ ಸರ್ಪನಕಟ್ಟೆ ಬಾಳೆಹಿತ್ತನ ಮನೆಯೊಂದರಲ್ಲಿ ಗ್ಯಾಸ್ ಸೋರಿಕೆ ಆಗುತ್ತಿರುವ ಬಗ್ಗೆ ಗ್ಯಾಸ್ ಕಂಪನಿಗೆ ತುರ್ತು ಫೋನ್ ಬಂದಿತ್ತು. ಕಂಪನಿಯವರು ತಮ್ಮ ಸಿಬ್ಬಂದಿಯನ್ನು ಕಳುಹಿಸಿದ್ದರು. ರಾಜಸ್ಥಾನ ಮೂಲದ ರಾಜುರಾಮ ಸದ್ಯ ಮೂಡಭಟ್ಕಳದಲ್ಲಿ ವಾಸಿಸುತ್ತಿದ್ದು, ತಕ್ಷಣ ಸ್ಥಳಕ್ಕೆ ತೆರಳಿದ್ದರು. ಭಾನುವಾರ ಮನೆ ಒಳಗಿದ್ದ ಗ್ಯಾಸ್ ಸಿಲೆಂಡರ್’ನ್ನು ಹೊರಗೆ ತಂದು ಅದನ್ನು ರಿಪೇರಿ ಮಾಡುತ್ತಿದ್ದರು.
ಈ ನಡುವೆ ಬಚ್ಚಲು ಮನೆಗೆ ಹಾಕಿದ ಬೆಂಕಿ ಗ್ಯಾಸ್ ಸಿಲೆಂಡರ್ ಬಳಿ ತಲುಪಿದ್ದು, ಬೆಂಕಿ ಆರಿಸುವ ಪ್ರಯತ್ನ ನಡೆಸಿದ ರಾಜಾರಾಮ ಅವರು ಗಾಯಗೊಂಡರು. ಮೂಕಾಂಬಿಕೆ ಗ್ಯಾಸ್ ಎಜನ್ಸಿಯವರು ರಾಜುರಾಮ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.