ಯಲ್ಲಾಪುರ: ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆಯ ಮೊದಲ ಬ್ಯಾಚಿನ ಪ್ರತಿಭಾನ್ವಿತ ವಿದ್ಯಾರ್ಥಿ ಗಂಗವ್ವ ಜಾಲಿಯಾಳ ಅವರ ಸಾಧನೆ ಗುರುತಿಸಿ WHR ಆರ್ ಕೆ ಪೌಂಡೇಶನ್”ನಯಲ್ಲಾಪುರ ಘಟಕದವರು ಅವರನ್ನು ಸನ್ಮಾನಿಸಿದರು.
`1955ರಲ್ಲಿ ವೈಟಿಎಸ್‌ಎಸ್ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿದ್ದು, ಈಗಿನ ಪೊಲೀಸ್ ಕ್ವಾಟರ್ಸ ಎದುರಿನ ಪ್ರಭಾಕರ ಕುದಳೆ ಅವರ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು. ಅದಾದ ನಂತರ ಈಗಿರುವ ಆವರಣಕ್ಕೆ ಶಾಲೆ ಸ್ಥಳಾಂತರವಾಗಿದ್ದು, ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ ಬಾಬುರಾವ್ ಬಿಕ್ಕು ಭಟ್ಟ ಅವರು ವೈಟಿಎಸ್‌ಎಸ್ ಸಂಸ್ಥೆಯ ಮೊದಲ ಅಧ್ಯಕ್ಷರಾಗಿದ್ದರು. ವಿ ಆರ್ ಪರಮಾನಂದ ಅವರು ಆ ಅವಧಿಯಲ್ಲಿ ಪ್ರಾಚಾರ್ಯರಾಗಿದ್ದು, ಪ್ರಥಮ ಬ್ಯಾಚಿನಲ್ಲಿ 44 ವಿದ್ಯಾರ್ಥಿಗಳಿದ್ದರು’ ಎಂದು ಗಂಗವ್ವ ಜಾಲಿಯಾಳ ಅವರು ನೆನಪಿಸಿಕೊಂಡರು. ತಾನು ಅಲ್ಲಿ 8ನೇ ತರಗತಿ ಪ್ರವೇಶ ಪಡೆದು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕದೊoದಿಗೆ ಪಾಸಾಗಿರುವುದನ್ನು ಮೆಲಕು ಹಾಕಿದರು. `ಸವಿತಾ ದೇವನಳ್ಳಿ, ಮುಕ್ತಾ ನಾಯ್ಕ, ರೇಖಾ ದೇಸಾಯಿ ಅವರು ತನ್ನ ಸಹಪಾಠಿಯಾಗಿದ್ದರು’ ಎಂದು ಗಂಗವ್ವ ಜಾಲಿಯಾಳ ಅವರು ಸ್ಮರಿಸಿಕೊಂಡರು.
`ಆ ಅವಧಿಯಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುವುದು ಅಂದರೆ ದೊಡ್ಡ ಸಾಧನೆಯಾಗಿತ್ತು. ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ್ದ ಕೃಷಿಕ ಚನ್ನಪ್ಪ ಜಾಲಿಯಾಳ ಅವರು ಹೆಣ್ಣು ಮಗಳ ವಿದ್ಯಾಬ್ಯಾಸಕ್ಕೆ ಉತ್ತೇಜನ ನೀಡಿದ್ದರು. ಆ ಅವಧಿಯಲ್ಲಿ ಶಾಲೆ ಕಲಿತು ಉತ್ತಮ ಅಂಕ ಪಡೆದಿದ್ದ ಗಂಗವ್ವ ಜಾಲಿಯಾಳ ವಿಶಿಷ್ಠ ಸಾಧಕಿ’ ಎಂದು WHR ಆರ್ ಕೆ ಪೌಂಡೇಶನ್ ತಾಲೂಕಾ ಅಧ್ಯಕ್ಷೆಯೂ ಆಗಿರುವ ನ್ಯಾಯವಾದಿ ಬೇಬಿ ಅಮೀನಾ ಶೇಖ್ ಅವರು ಹೇಳಿದರು.
ಗಂಗವ್ವ ಜಾಲಿಯಾಳ ಅವರಿಗೆ ಬೇಬಿ ಅಮೀನಾ ಶೇಖ್ ಅವರು ಶಾಲು ಹೊದೆಸಿ ಸನ್ಮಾನಿಸಿದರು. ಪ್ರಮುಖರಾದ ಸಂತೋಷ ಮರಾಠಿ, ದಿಗಂಬರ ಮರಾಠಿ, ಚಂದ್ರಕಾ0ತ ಮರಾಠಿ, ವಿನಾಯಕ ಮರಾಠಿ, ಟಿ ಪಿ ಆಯಿಷಾ, ಶೀಲಾ ಮರಾಠಿ, ಜುಬೇದಾ ಶೇಖ್ ಇನ್ನಿತರರು ಈ ವೇಳೆ ಹಾಜರಿದ್ದರು.