ಯಲ್ಲಾಪುರ: ಜಂಬೇಸಾಲಿನ ಶ್ರೀಲತಾ ಹೆಗಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿ ಮುಕ್ತಮಾತು ಕಥೆ ನಡೆಸಿದ್ದಾರೆ.
ಈ ವೇಳೆ ಲತಾ ಅವರು ಕೃಷಿ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸಂವಾದ ನಡೆಸಿದ್ದು, ಕೃಷಿ ವಿಷಯವಾಗಿ ಸಾಧನೆ ಮಾಡಲು ಬಯಸುವ ಮಹಿಳೆಯರಿಗೆ ಸರ್ಕಾರದಿಂದ ಪ್ರೋತ್ಸಾಹ ದೊರೆಯಬೇಕು ಎಂದು ಮನವಿ ಮಾಡಿದ್ದಾರೆ. ನೈಸರ್ಗಿಕ ಕೃಷಿ ತರಬೇತಿ ಪಡೆದ ಕೃಷಿ ಸಖಿಯರಿಗೆ ಈ ಅವಕಾಶ ಕಲ್ಪಿಸಲಾಗಿತ್ತು.
ಲತಾ ಅವರು 10 ಗುಂಟೆ ಕ್ಷೇತ್ರದಲ್ಲಿ ವಿವಿಧ ಬಗೆಯ ಹೂಗಳನ್ನು ಬೆಳೆದು ಸಾಧನೆ ಮಾಡಿದ್ದು, ಲತಾ ಅವರ ಪತಿ ರಾಜೀವ ಹೆಗಡೆ ಸಹ ನೈಸರ್ಗಿಕ ಪುಷ್ಪಕೃಷಿ, ಪಶು ಆಹಾರ ತಯಾರಿಕೆ, ಹೈನುಗಾರಿಕೆ ಮೊದಲಾದ ಕೃಷಿ ಚಟುವಟಿಕೆಗಳಲ್ಲಿ ತೊಡಗಿದವರಾಗಿದ್ದಾರೆ.
ಮೋದಿ – ಯೋಗಿ ಜೊತೆ ಯಲ್ಲಾಪುರದ ಕುವರಿ!

Leave a comment