6 Skip to content

ನಾದಿನಿ ಮೇಲೆ ಶಕ್ತಿ ಪ್ರದರ್ಶಿಸಿದ ಯೋಧ!

ಸಿದ್ದಾಪುರ: ಸಿ ಆರ್ ಪಿ ಎಫ್’ನಲ್ಲಿ ಸೇವೆ ಸಲ್ಲಿಸುತ್ತಿರುವ ಧಾರವಾಡದ ಮೂಲದ ಯೋಧ ತನ್ನ ನಾದಿನಿಯನ್ನು ಗದ್ದೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಅಣ್ಣಿಗೇರಿ ಮೂಲದ ಕೊಟ್ರೇಶ್ (46ವರ್ಷ) ಆರೋಪಿ. ಈತ ತನ್ನ ನಾದಿನಿ ರೇಣುಕಾ ಎಂಬಾಕೆಯ ಜೊತೆ ಮೋಜು-ಮಸ್ತಿಗಾಗಿ ಕಬ್ಬಿನಹೊಳೆಗೆ ಕರೆದುಕೊಂಡಿದ್ದ. ಅಲ್ಲಿ ಇಬ್ಬರು ಒಟ್ಟಿಗೆ ಬಿಯರ್ ಕುಡಿದಿದ್ದರು. ಈ ನಡುವೆ ಇಬ್ಬರ ನಡುವೆ ಜಗಳವಾಗಿದ್ದು, ಅದೇ ಸಿಟ್ಟಿನಲ್ಲಿ ಕೊಟ್ರೇಶ್ ಬಿಯರ್ ಬಾಟಲಿಯಿಂದ ರೇಣುಕಾ ತಲೆಯ ಮೇಲೆ ಹೊಡೆದಿದ್ದಾನೆ.
ಆಕೆ ತಕ್ಷಣ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆ ಸತ್ತಿರಬಹುದು ಎಂದು ಭಾವಿಸಿದ ಆತ ಅಲ್ಲಿಂದ ಪರಾರಿಯಾಗಿದ್ದ. ನಂತರ ಪ್ರಜ್ಞೆ ಬಂದ ರೇಣುಕಾ ಸಮೀಪದ ಪೆಟ್ರೊಲ್ ಪಂಪ್ ಸಿಬ್ಬಂದಿ ಸಹಾಯ ಪಡೆದು ಆಸ್ಪತ್ರೆ ಸೇರಿದ್ದಾಳೆ. ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.

Leave a comment

Leave a Reply

You cannot copy content of this page