ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರು ವಿದೇಶ ಪ್ರವಾಸದಲ್ಲಿದ್ದು, ಅಮೇರಿಕಾದಲ್ಲಿ ಚಿತ್ರನಟ ಶಿವರಾಜಕುಮಾರ ಅವರನ್ನು ಭೇಟಿಯಾಗಿದ್ದಾರೆ. ಶಾಸಕರು ಮರಳುವವರೆಗೂ ಭೀಮಣ್ಣ ನಾಯ್ಕ ಅವರ ಪುತ್ರ ಅಶ್ವಿನ್ ನಾಯ್ಕ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು, ಇಲ್ಲಿನ ಆಗು-ಹೋಗುಗಳ ಬಗ್ಗೆ ವಿದೇಶಕ್ಕೆ ವರದಿ ರವಾನಿಸುತ್ತಿದ್ದಾರೆ!
ಶಾಸಕ ಭೀಮಣ್ಣ ನಾಯ್ಕ ಅವರಿಗೆ ಶಿವರಾಜಕುಮಾರ ಹತ್ತಿರದ ಸಂಬoಧಿ. ಶಿವರಾಜಕುಮಾರ್ ಅನಾರೋಗ್ಯದ ಹಿನ್ನಲೆ ವಿದೇಶಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನಲೆ ಶಾಸಕ ಭೀಮಣ್ಣ ನಾಯ್ಕ ಸಹ ಅವರ ಆರೋಗ್ಯ ವಿಚಾರಿಸಲು ಅಲ್ಲಿಗೆ ತೆರಳಿದ್ದಾರೆ. ಹೀಗಾಗಿ ಜನವರಿ 24ರವರೆಗೂ ಶಾಸಕ ಭೀಮಣ್ಣ ನಾಯ್ಕ ಕ್ಷೇತ್ರದಲ್ಲಿರುವುದಿಲ್ಲ.
ಇನ್ನೂ ಶಾಸಕರು ಕ್ಷೇತ್ರದಲ್ಲಿ ಇರದ ವೇಳೆ ಸಿದ್ದಾಪುರದ ಬಾಲಿಕೊಪ್ಪದಲ್ಲಿ ಅಯ್ಯಪ್ಪ ಭಕ್ತರ ಮೇಲೆ ಕಾರು ನುಗ್ಗಿ ಅವಾಂತರ ನಡೆದಿದೆ. ಗಾಯಗೊಂಡವರನ್ನು ವಿಚಾರಿಸುವುದಕ್ಕಾಗಿ ಭೀಮಣ್ಣ ನಾಯ್ಕ ಅವರು ತಮ್ಮ ಪುತ್ರ ಅಶ್ವಿನ್ ನಾಯ್ಕ ಅವರನ್ನು ಕಳುಹಿಸಿಕೊಟ್ಟಿದ್ದು, ಅಶ್ವಿನ್ ನಾಯ್ಕ ಅವರೆಲ್ಲರ ಯೋಗಕ್ಷೇಮ ವಿಚಾರಿಸಿದರು.
`ಶಾಸಕರು ಮರಳಿದ ನಂತರ ಅವಘಡದಲ್ಲಿ ಸಾವನಪ್ಪಿದ ಯುವತಿ ಹಾಗೂ ಗಾಯಗೊಂಡವರ ಮನೆಗೆ ಭೇಟಿ ನೀಡಲಿದ್ದಾರೆ’ ಎಂದವರು ತಿಳಿಸಿದರು.



