ದೇವಾಲಯ ಹಾಗೂ ಬಸ್ ನಿಲ್ದಾಣದ ಮುಂದೆ ಶೆಡ್ ನಿರ್ಮಿಸಿ ಸರಾಯಿ ಮಾರಾಟ ಮಾಡುತ್ತಿದ್ದವರ ವಿರುದ್ಧ ಬನವಾಸಿ ಪೊಲೀಸ್ ಠಾಣೆಯ ಪಿಎಸ್‌ಐ ಚಂದ್ರಕಲಾ ಪತ್ತಾರ್ ಕಾನೂನು ಕ್ರಮ ಜರುಗಿಸಿದ್ದಾರೆ.
ಸಿದ್ದಾಪುರ ಅರೆಹಳ್ಳಿಯ ವ್ಯಾಪಾರಿ ನಾಗರಾಜ ನಾಯ್ಕ ಅವರು ಬನವಾಸಿ ಕೊಪ್ಪ ಬಳಿಯ ಗಣಪತಿ ದೇವಸ್ಥಾನದ ಬಳಿ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಅಲ್ಲಿ ಅಕ್ರಮ ಮದ್ಯ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದರು. ಜೊತೆಗೆ ಅಲ್ಲಿಗೆ ಬರುವವರಿಗೂ ಅವರು ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದರು.
ಕೊಪ್ಪ ಬಸ್ ನಿಲ್ದಾಣದ ಬಳಿ ಮಂಜುನಾಥ ದೇವಾಡಿಗ ಎಂಬಾತರು ಸಹ ಶೆಡ್ ನಿರ್ಮಿಸಿ ಮದ್ಯ ಮಾರಾಟ ಮಾಡುತ್ತಿದ್ದರು. ಅಲ್ಲಿಯೇ ಮದ್ಯ ಸೇವನೆಗೂ ಅವಕಾಶ ಮಾಡಿಕೊಟ್ಟಿದ್ದರು. ಈ ಹಿನ್ನಲೆ ಜನವರಿ 29ರಂದು ಚಂದ್ರಕಲಾ ಪತ್ತಾರ್ ಅವರು ತಮ್ಮ ಪೊಲೀಸ್ ತಂಡದೊAದಿಗೆ ದಾಳಿ ನಡೆಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು.




