6
  • Latest

ಮಾಗೋಡು ಆಲೆಮನೆ: ಪ್ರವೇಶ ಉಚಿತ.. ನೊರೆ ಬೆಲ್ಲದ ಸವಿ ಖಚಿತ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಾಗೋಡು ಆಲೆಮನೆ: ಪ್ರವೇಶ ಉಚಿತ.. ನೊರೆ ಬೆಲ್ಲದ ಸವಿ ಖಚಿತ!

AchyutKumar by AchyutKumar
in ಸ್ಥಳೀಯ

ಏಳು ವರ್ಷಗಳ ಹಿಂದೆ ಯಲ್ಲಾಪುರ ತಾಲೂಕಿನಲ್ಲಿ `ಆಲೆಮನೆ ಹಬ್ಬ’ ಪರಿಚಯಿಸಿದ ಮಾಗೋಡಿನವರು ಇದೀಗ 8ನೇ ವರ್ಷದ ಆಲೆಮನೆ ಹಬ್ಬದ ತಯಾರಿ ನಡೆಸಿದ್ದಾರೆ. ಫೆಬ್ರವರಿ 1ರ ಸಂಜೆ 5 ಗಂಟೆಗೆ ಮಾಗೋಡು ಕಾಲೋನಿಯಲ್ಲಿ ತಾಜಾ ಕಬ್ಬಿನ ಹಾಲು ವಿತರಣೆ ನಡೆಯಲಿದೆ. ಕಬ್ಬಿನ ಹಾಲು ಸವಿಯಲು ಆಗಮಿಸಿದವರಿಗೆ ಮಿರ್ಜಿ-ಮಂಡಕ್ಕಿ ಸೇರಿ ಬಗೆ ಬಗೆಯ ಖಾದ್ಯಗಳನ್ನು ಸಹ ಉಣಬಡಿಸಲು ಊರಿನವರು ಸಜ್ಜಾಗಿದ್ದಾರೆ. ಇದರೊಂದಿಗೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಸಹ ನಡೆಯುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳ ಪ್ರವೇಶ ಉಚಿತ!

ಈ ದಿನ ರಾತ್ರಿ 10 ಗಂಟೆಯವರೆಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಸಮೀಪದ ಮಾರುತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭವ್ಯ ಮೆರವಣಿಗೆಯನ್ನು ಆಯೋಜಿಸಲಾಗಿದೆ. ನಂತರ ಗೋಪೂಜೆ, ಸಭಾ ಪೂಜೆ, ಭಗವದ್ಗೀತಾ ಪಠಣ, ರಾಷ್ಟ್ರಗೀತೆಯೊಂದಿಗೆ ಆಲೆಮನೆ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಈ ಬಾರಿ 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. 2 ಗಾಣಗಳ ಮೂಲಕ ಕಬ್ಬಿನಹಾಲು ಸಿದ್ಧಪಡಿಸಿ, 4 ಕೌಂಟರ್’ಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ ಹಳ್ಳಿಯ ಬಗೆ ಬಗೆಯ ತಿಂಡಿ-ತಿನಿಸುಗಳನ್ನು ನೀಡಲಾಗುತ್ತದೆ. ಕೌಂಟರ್ ಗಳಲ್ಲಿ ಕಬ್ಬಿನಹಾಲು, ತಿಂಡಿಗಳನ್ನು ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ಕಬ್ಬಿನಹಾಲು ಸಿದ್ಧಪಡಿಸುವುದು, ಕೌಂಟರ್ ಗಳ ಮೂಲಕ ವಿತರಿಸುವುದು, ತಿಂಡಿಗಳನ್ನು ತಯಾರಿಸುವುದು, ಪಾರ್ಕಿಂಗ್ ವ್ಯವಸ್ಥೆ ಹೀಗೆ ವಿವಿಧ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸುವುದಕ್ಕೆ ಆಲೆಮನೆ ಹಬ್ಬ ಸಮಿತಿಯ ನೂರಾರು ಕಾರ್ಯಕರ್ತರು ಶ್ರಮಿಸಲಿದ್ದಾರೆ. ಕಬ್ಬಿನಹಾಲಿನಿಂದ ಸಿದ್ಧಪಡಿಸಿದ ಬೆಲ್ಲ, ತೊಡದೇವು ಮುಂತಾದ ಖಾದ್ಯಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ನರಸಿಂಹ ಭಟ್ಟ ಕುಂಕಿಮನೆ ನೇತೃತ್ವದಲ್ಲಿ ಕ್ಕೂ ಹೆಚ್ಚು ಕಾರ್ಯಕರ್ತರು ಕಳೆದ 3-4 ದಿವಸಗಳಿಂದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನಶಿಸುತ್ತಿರುವ ಆಲೆಮನೆ ಸಂಪ್ರದಾಯವನ್ನು ಉಳಿಸುವ ಪ್ರಯತ್ನವಾಗಿ ಹಲವು ವಿಶೇಷತೆಗಳೊಂದಿಗೆ ಈ ಹಬ್ಬ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಮಾಗೋಡ ಆಲೆಮನೆ ಹಬ್ಬ ಪ್ರಸಿದ್ಧಿ ಪಡೆದಿದೆ. ಅಚ್ಚುಕಟ್ಟಾದ ವ್ಯವಸ್ಥೆ, ಸಂಘಟನೆಯ ಶಿಸ್ತು ಪ್ರತಿ ವರ್ಷ ಆಲೆಮನೆ ಹಬ್ಬದ ಯಶಸ್ಸಿಗೆ ಕಾರಣ.

ಮಾರಾಟಕ್ಕೂ ಲಭ್ಯ
ಕಬ್ಬಿನ ಹಾಲಿನ ಜೊತೆ ಕಬ್ಬಿನ ಹಾಲಿನಿಂದ ತಯಾರಿಸಿದ ಉತ್ಪನ್ನಗಳು ಇಲ್ಲಿ ಮಾರಾಟ ಸಹ ನಡೆಯಲಿದೆ. ತೋಡದೇವು, ಜೋನಿ ಬೆಲ್ಲ ಸೇರಿ ಬಗೆ ಬಗೆಯ ಖಾದ್ಯಗಳನ್ನು ಖರೀದಿಸುವವರಿಗೆ ಇಲ್ಲಿ ಸುಗ್ಗಿಯ ಕಾಲ!

ನೀವು ಬನ್ನಿ.. ನಿಮ್ಮವರನ್ನು ಕರೆ ತನ್ನಿ!

ShareSendTweetShare
Previous Post

ಸರ್ಕಾರಿ ಬಸ್ಸಿಗೆ ಗುದ್ದಿದ ಟಿಪ್ಪರ್: 15ಕ್ಕೂ ಅಧಿಕ ಜನರಿಗೆ ಗಾಯ

Next Post

ಬೆಳೆ ವಿಮೆ | ವಿಮಾ ಕಂಪನಿ ಜೊತೆ ಹವಾಮಾನ ಇಲಾಖೆ ತಿಕ್ಕಾಟ: ಅಡಿಕೆ ಬೆಳೆಗಾರರಿಗೆ ಇನ್ನಷ್ಟು ಸಂಕಷ್ಟ!

Next Post

ಬೆಳೆ ವಿಮೆ | ವಿಮಾ ಕಂಪನಿ ಜೊತೆ ಹವಾಮಾನ ಇಲಾಖೆ ತಿಕ್ಕಾಟ: ಅಡಿಕೆ ಬೆಳೆಗಾರರಿಗೆ ಇನ್ನಷ್ಟು ಸಂಕಷ್ಟ!

ಮಹಿಳೆ ನೋವಿಗೆ ಮಿಡಿದ ಮಾಜಿ ಶಾಸಕಿಯ ಮನ!

ಹಿಟಾಚಿ ಕೆಲಸ: ಕಾಮಗಾರಿ ವೀಕ್ಷಣೆಗೆ ಜನವೋ ಜನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.