6
  • Latest

ಸೇನಾ ನಿವೃತ್ತಿ | ಸೈನಿಕನ ಆಗಮನಕ್ಕೆ ಅದ್ಧೂರಿ ಸ್ವಾಗತದ ಸಿದ್ಧತೆ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಸೇನಾ ನಿವೃತ್ತಿ | ಸೈನಿಕನ ಆಗಮನಕ್ಕೆ ಅದ್ಧೂರಿ ಸ್ವಾಗತದ ಸಿದ್ಧತೆ!

AchyutKumar by AchyutKumar
in ದೇಶ - ವಿದೇಶ

ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್ ಚೋಪ್ರಾ ಅವರ ತರಬೇತುದಾರರಾದ ಕಾಶಿನಾಥ ನಾಯ್ಕ ಅವರು ಭಾರತೀಯ ಸೇನೆಯಲ್ಲಿ 25 ವರ್ಷ ಸೇವೆ ಪೂರೈಸಿ ನಿವೃತ್ತರಾಗಿದ್ದಾರೆ. ಇದೀಗ ಅವರು ತಮ್ಮ ಊರಾದ ಶಿರಸಿಗೆ ಮರಳುತ್ತಿದ್ದಾರೆ. ಹೀಗಾಗಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲು ಶಿರಸಿಯ ಜನ ಸಜ್ಜಾಗಿದ್ದಾರೆ.

ಫೆಬ್ರವರಿ 3ರ ಮಧ್ಯಾಹ್ನ 3.30ಕ್ಕೆ ಶಿರಸಿಯ ನಿಲೇಕಣಿ ಗಣಪತಿ ದೇವಾಲಯದ ಎದುರು ಕಾಶಿನಾಥ ನಾಯ್ಕ ಅವರನ್ನು ಸ್ವಾಗತಿಸಲಾಗುತ್ತದೆ. ಬೈಕ್ ರ‍್ಯಾಲಿ ಮೂಲಕ ಅವರನ್ನು ಹಳೆ ಬಸ್ ನಿಲ್ದಾಣ ಸರ್ಕಲಿಗೆ ಕರೆತಂದು ಅಲ್ಲಿ ಸನ್ಮಾನಿಸಲಾಗುತ್ತದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಶಿರಸಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಜೊತೆ ಇನ್ನಿತರ ಸಂಘಟನೆಗಳು ಸೇರಿ ಈ ಕಾರ್ಯಕ್ರಮ ಆಯೋಜಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಬಳಿಯ ಬೆಂಗಲೆಯವರಾದ ಕಾಶಿನಾಥ ನಾಯ್ಕ ಅವರು ಬಿಎ ಓದಿದ್ದಾರೆ. ಮೊದಲು ಅವರು ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಅದಾದ ನಂತರ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ನಿರಂತರ ಪ್ರಯತ್ನದ ಫಲವಾಗಿ ಕಾರ್ಗಿಲ್ ಯುದ್ದದ ಅಂತ್ಯದ ವೇಳೆ ಅವರು ಸೇನೆ ಸೇರಿದ್ದರು. ಆಗ ಅಲ್ಲಿನ ಕ್ರೀಡಾ ವಿಭಾಗ ಅವರನ್ನು ಆಕರ್ಷಿಸಿತು. ಆ ಅವಧಿಯಲ್ಲಿ ಅವರಿಗೆ ಅಲ್ಲಿ ಯಾವುದೇ ವಿಶೇಷ ತರಬೇತುದಾರರು ಇರಲಿಲ್ಲ. ಆಗ ಅಲ್ಲಿನ ಸೈನಾಧಿಕಾರಿಗಳ ಮಾರ್ಗದರ್ಶನದಲ್ಲಿ ಅವರು ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದರು.

ಕ್ರೀಡಾ ವಿಭಾಗದಲ್ಲಿಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಕ್ರೀಡಾಪಟು ನಿರಜ್ ಚೋಪ್ರಾ ಅವರಿಗೆ ಕಾಶಿನಾಥ ನಾಯ್ಕ ಅವರು ಗುರುವಾಗಿದ್ದರು. ಜಾವಲಿನ್ ಎಸೆತದಲ್ಲಿ ಚಾಣಾಕ್ಷತನ ಪಡೆದಿರುವ ಕಾಶಿನಾಥ ನಾಯ್ಕ ಅವರು ಸೈನಿಕ ವೃತ್ತಿಯಲ್ಲಿ ಸಹ ಅಷ್ಟೇ ಶಿಸ್ತಿನಿಂದ ಇರುತ್ತಿದ್ದರು. 2010ರಲ್ಲಿ ಜರುಗಿದ 19ನೇ ಕಾಮನ್ ವೆಲ್ತ್ ಪಂದ್ಯಾಟದಲ್ಲಿ ಕಂಚು ಪದಕವನ್ನು ಅವರು ಗೆದ್ದಿದ್ದಾರೆ. ಆರ್ಮಿ ಕ್ರೀಡಾ ತರಬೇತಿ ಶಿಬಿರದಲ್ಲಿ ಅಥ್ಲೇಟಿಕ್ ತರಬೇತುದಾರರಾಗಿ ಈಗ ಗೋಡಪಡಿ, ಪೂಣೆಯಲ್ಲಿ ಸಹ ಅವರು ಕ್ರೀಡಾ ತರಬೇತದಾರನಾಗಿದ್ದಾರೆ. ಅವರ ಪ್ರತಿಭೆಗೆ 2012ರಲ್ಲಿ ಎಕಲವ್ಯ ಪ್ರಶಸ್ತಿ, 2011ರಲ್ಲಿ ಕರ್ನಾಟಕ ರಾಜ್ಯೋತ್ಸವ, 2023ರಲ್ಲಿ ಗುರು ವಿದ್ಯಾರಣ್ಯ ಪ್ರಶಸ್ತಿಗಳು ಸಿಕ್ಕಿವೆ. ಈವರೆಗೆ ಕಾಶೀನಾಥ ನಾಯ್ಕ ಅವರು 19 ಅಂತರಾಷ್ಟಿಯ ಕ್ರೀಡಾ ಪಂದ್ಯಾಟದಲ್ಲಿ ಭಾಗವಹಿಸಿದ್ದಾರೆ. 2010ರಲ್ಲಿ ದಕ್ಷಿಣಾ ಏಷ್ಯಾ ಕ್ರೀಡಾ ಕೂಟದಲ್ಲಿ ಬಂಗಾರ ಪದಕ, 2008ರಲ್ಲಿ ಏಷಿಯನ್ ಗ್ರಾಂಡ್ ಪೀಕ್ಸ್ ಕ್ರೀಡಾ ಕೂಟದಲ್ಲಿ ಬೆಳ್ಳಿ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸೇನೆಯಲ್ಲಿದ್ದುಕೊoಡೇ ಅವರು 2013ರಿಂದ ಆರ್ಮಿ ಕ್ರೀಡಾ ತರಬೇತಿ ಸಂಸ್ಥೆಯ ತರಬೇತದಾರರಾಗಿದ್ದು, ಅಂತರರಾಷ್ಟ್ರೀಯ ಕ್ರೀಡಾ ಪಟುಗಳಾದ ನಿರಜ ಚೋಪ್ರ, ಅಣ್ಣು ರಾಣಿ, ರಾಜೇಶ ಕುಮಾರ ಬಿಂದ್, ದೇವೆಂದರ ಸಿಂಗ, ಸಮರ್ಜಿತ ಸಿಂಗ್, ಅಮಿತ್ ಕುಮಾರ ರಾಹಿತ್ ಯಾದವ, ಮನು ಡಿ ಪಿ, ಅನಿಲ್ ಕುಮಾರ, ಉತ್ತಮ ಪಾಟೀಲ್ ಮೊದಲಾದವರಿಗೆ ವಿಶೇಷ ತರಬೇತಿ ನೀಡಿದ್ದಾರೆ.

ShareSendTweetShare
Previous Post

ಗಣಕಯಂತ್ರ ಪರೀಕ್ಷೆ: ಶಿರಸಿ – ಕುಮಟಾದಲ್ಲಿ ನಿಷೇಧಾಜ್ಞೆ!

Next Post

ದೌರ್ಜನ್ಯ ತಡೆಗೆ ಜಿಲ್ಲಾ ಮಟ್ಟದ ಸಮಿತಿ

Next Post

ದೌರ್ಜನ್ಯ ತಡೆಗೆ ಜಿಲ್ಲಾ ಮಟ್ಟದ ಸಮಿತಿ

ಫೈನಾನ್ಸ್ ಸಿಬ್ಬಂದಿಯ ಆತ್ಮಹತ್ಯೆ ಪ್ರಹಸನ!

ಇನ್ನೂ ಬಗೆಹರಿಯದ ಕೋಟಿ ಕಾರಿನ ರಹಸ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.