ಜಾನುವಾರುಗಳಿಗೆ ಆಶ್ರಯ ನೀಡಿದ್ದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದ್ದ ಹುಲ್ಲು ಬೂದಿಯಾಗಿದೆ.
ಸಿದ್ದಾಪುರದ ದಾನಮಾಂವ್ ಬಳಿಯ ಕಲಕೈ ಮಹಾಬಲೇಶ್ವರ ನಾಯ್ಕ ಅವರು ಪಶು ಸಂಗೋಪನೆಯಲ್ಲಿ ನಿರತರಾಗಿದ್ದರು. ಅವರು ತಮ್ಮ ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಕಟ್ಟಿದ್ದು, ಜಾನುವಾರುಗಳು ಕೊಟ್ಟಿಗೆಯಲ್ಲಿರುವಾಗಲೇ ತಡರಾತ್ರಿ ಅಗ್ನಿ ಅವಘಡ ನಡೆದಿದೆ.
ಬೆಂಕಿ ಉರಿದಾಗ ಹಸುಗಳು ಕೂಗಿಕೊಂಡಿದ್ದು, ತಕ್ಷಣ ಮಹಾಬಲೇಶ್ವರ ನಾಯ್ಕ ಅವರು ಕಟ್ಟಿದ್ದ ಜಾನುವಾರುಗಳ ಹಗ್ಗ ಬಿಚ್ಚಿದರು. ಹೀಗಾಗಿ ಕೊಟ್ಟಿಗೆಯಿಂದ ಹೊರ ಬಂದು ಜಾನುವಾರುಗಳು ಜೀವ ಉಳಿಸಿಕೊಂಡವು. ಆದರೆ, ಅಲ್ಲಿದ್ದ ಮರದ ಹಲಿಗೆ ಹಾಗೂ ಹುಲ್ಲುಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ.
ನೀರು ತಂದು ಆರಿಸುವುದರೊಳಗೆ ಕೊಟ್ಟಿಗೆ ಸುಟ್ಟು ಕರಕಲಾಗಿತ್ತು. ಈ ಅಗ್ನಿ ಅವಘಡದಿಂದ ಕೊಟ್ಟಿಗೆ ಮಾಲಕರಿಗೆ ಅಂದಾಜು 20 ಸಾವಿರ ರೂ ನಷ್ಟವಾಗಿದೆ.