ಸ್ನೇಹಿತನ ಜೊತೆ ಸುತ್ತಾಟಕ್ಕೆ ತೆರಳಿದ್ದ ಜೋಸೆಪ್ ಅಮೃತರಾಜ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ರಸ್ತೆ ಅಂಚಿನ ಕಬ್ಬಿಣದ ರಾಡು ಎದೆಗೆ ನಾಟಿದ್ದರಿಂದ ಅಲ್ಲಿಯೇ ಅವರು ಕೊನೆ ಉಸಿರೆಳೆದಿದ್ದಾರೆ.
ದಾಂಡೇಲಿಯ ಇಎಸ್‌ಐ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹಳೆ ದಾಂಡೇಲಿಯ ರೋಹಿತ್ ನಾಯ್ಕ (22) ಅವರು ಅದೇ ಊರಿನ ತಮ್ಮ ಸ್ನೇಹಿತ ಜೋಸೆಪ್ ಅಮೃತರಾಜ (22) ಜೊತೆ ಸುತ್ತಾಟಕ್ಕೆ ಹೋಗಿದ್ದರು. ಫೆಬ್ರವರಿ 1ರ ಸಂಜೆ ರೋಹಿತ ನಾಯ್ಕ ಬೈಕ್ ಓಡಿಸುತ್ತಿದ್ದರು. ಜೋಸೆಪ್ ಅಮೃತರಾಜ ಹಿಂದೆ ಕೂತಿದ್ದರು.
ಜೊಯಿಡಾದಿಂದ ಜನತಾ ಕಾಲೋನಿ ಕಡೆ ಬೈಕಿನಲ್ಲಿ ಬರುವಾಗ ಮುಂದಿದ್ದ ವಾಹನ ಹಿಂದಿಕ್ಕುವ ಭರದಲ್ಲಿ ರೋಹಿತ್ ನಾಯ್ಕ ತಮ್ಮ ಬೈಕನ್ನು ಕಚ್ಚಾ ರಸ್ತೆ ಕಡೆ ತಿರುಗಿಸಿದರು. ಆಗ ಬೈಕಿನ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದರು. ಅಲ್ಲಿ ಕಬ್ಬಿಣದ ರಾಡುಗಳಿದ್ದು, ಆ ಪೈಕಿ ಒಂದು ರಾಡ್ ಜೋಸೆಪ್ ಅಮೃತರಾಜ ಅವರ ಎದೆಗೆ ಚುಚ್ಚಿತು. ಪರಿಣಾಮ ಜೋಸೆಪ್ ಅಮೃತರಾಜ ಅಲ್ಲಿಯೇ ಕೊನೆಉಸಿರೆಳೆದರು.