ಒಂಟಿ ಮಹಿಳೆಯ ಮನೆಗೆ ನುಗ್ಗಿ ಅಲ್ಲಿದ್ದ ಆಭರಣ ಹಾಗೂ ಹಣ ದೋಚಿದ ಇಬ್ಬರನ್ನು ಪೊಲೀಸರು ಹಿಡಿದಿದ್ದಾರೆ.
ಮುಂಡಗೋಡ ವಡ್ಡರ್ ಓಣಿಯ ತಿಪ್ಪವ್ವ ಬೋವಿವಡ್ಡರ್ ಅವರ ಮನೆಯಲ್ಲಿ ಚಿನ್ನಾಭರಣಗಳು ಕಳ್ಳತನವಾಗಿದ್ದವು. ಮುಂಡಗೋಡು ಸುಭಾಶನಗರದ ಪ್ರವೀಣ ಬಸವರಾಜ ಭೋವಿ (23) ಹಾಗೂ ಕ್ಯಾಸನಕೇರಿಯ ರಾಕೇಶ ಹನಮಂತ ಹೆಬ್ಬಳ್ಳಿ ಅವರ ಮನೆಯ ಹಿಂಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದರು. ಮನೆಯ ಕಪಾಟಿನಲ್ಲಿದ್ದ ಬಂಗಾರದ ಗುಂಡು, ಸರ ಸೇರಿ 60 ಸಾವಿರ ರೂ ಮೌಲ್ಯದ ಆಭರಣವನ್ನು ದೋಚಿದ್ದರು.
ಇದರೊಂದಿಗೆ ಮನೆಯಲ್ಲಿದ್ದ 2 ಸಾವಿರ ರೂ ಹಣವನ್ನು ಸಹ ಆ ಇಬ್ಬರು ಲಪಟಾಯಿಸಿದ್ದರು. ಜನವರಿ 27ರಂದು ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದರು. ಫೆಬ್ರವರಿ 3ರಂದು ಪ್ರವೀಣ ಬೋವಿ ಹಾಗೂ ರಾಕೇಶ ಹೆಬ್ಬಳ್ಳಿ ಸಿಕ್ಕಿಬಿದ್ದರು. ಸಿಪಿಐ ರಂಗನಾಥ ನೀಲಮ್ಮನವರ್, ಪಿಎಸ್‌ಐ ಪರಶುರಾಮ ಮಿರ್ಜಗಿ, ಹನುಮಂತ ಗುಡಗಂಟಿ, ಪೊಲೀಸ್ ಸಿಬ್ಬಂದಿ ಮಂಜಪ್ಪ ಚಿಂಚಲಿ, ಕೋಟೇಶ್ವರ ನಾಗರವಳ್ಳಿ, ಅಣ್ಣಪ್ಪ ಬಡಿಗೇರ್ ಹಾಗೂ ತಿರುಪತಿ ಚೌಡಣ್ಣನವರ್ ವಿಚಾರಣೆ ನಡೆಸಿದಾಗ ಆರೋಪಿತರು ತಪ್ಪು ಒಪ್ಪಿಕೊಂಡರು.