ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟ ಸಾಂಬಶಿವ ಹೆಬ್ಬಾರ್ ಅವರು ಕಾಣೆಯಾಗಿ ಮೂರು ದಿನ ಕಳೆದಿದೆ. ಈವರೆಗೂ ಅವರ ಸುಳಿವು ಸಿಕ್ಕಿಲ್ಲ.
ಯಲ್ಲಾಪುರ ತಾಲೂಕಿನ ಮಲವಳ್ಳಿಯ ಕೃಷಿಕ ಸಾಂಬಶಿವ ಹೆಬ್ಬಾರ್ ಜನವರಿ ೩೧ರಂದು ಯಲ್ಲಾಪುರಕ್ಕೆ ಹೋಗುವುದಾಗಿ ಹೇಳಿದ್ದರು. ಮಧ್ಯಾಹ್ನ ೩ ಗಂಟೆಗೆ ಬೈಕ್ ಏರಿ ಹೊರಟ ಅವರು ಮಲವಳ್ಳಿಯ ವಿಶ್ವನಾಥ ಭಟ್ಟರ ಮನೆ ಬಳಿ ಬೈಕ್ ಇರಿಸಿದ್ದರು. ಅದಾದ ನಂತರ ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಯಲ್ಲಾಪುರವನ್ನು ತಲುಪಿದ್ದರು.
ಆದರೆ, ಪೇಟೆಗೆ ಬಂದ ಅವರು ಮುಂದೆ ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಲಿಲ್ಲ. ಸಾಕಷ್ಟು ಸಮಯವಾದರೂ ಸಾಂಬಶಿವ ಹೆಬ್ಬಾರರು ಮನೆಗೆ ಬಾರದ ಕಾರಣ ಅವರ ಪತ್ನಿ ಶಾರದಾ ಹೆಬ್ಬಾರ್ ಆತಂಕಕ್ಕೆ ಒಳಗಾದರು. ಅಲ್ಲಿ-ಇಲ್ಲಿ ಫೋನ್ ಮಾಡಿ ವಿಚಾರಿಸಿದರೂ ಸಾಂಬಶಿವ ಹೆಬ್ಬಾರ್ ಅವರ ಸುಳಿವು ಸಿಗಲಿಲ್ಲ.
ಈ ಹಿನ್ನಲೆ ಶಾರದಾ ಹೆಬ್ಬಾರ್ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಇದೀಗ ಸಾಂಬಶಿವ ಹೆಬ್ಬಾರ್ ಅವರ ಹುಡುಕಾಟ ನಡೆಸಿದ್ದಾರೆ.