25 ವರ್ಷಗಳ ಸೈನಿಕ ವೃತ್ತಿಯಿಂದ ನಿವೃತ್ತರಾದ ಕಾಶಿನಾಥ ನಾಯ್ಕ ಅವರು ಸೋಮವಾರ ತವರಿಗೆ ಮರಳಿದ್ದು, ಸಾವಿರ ಸಂಖ್ಯೆಯ ಜನ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಕಾಶಿನಾಥ ನಾಯ್ಕ ಅವರ ಜೊತೆ ಅವರ ಕುಟುಂಬದವರನ್ನು ಶಿರಸಿಯ ಮೆರವಣಿಗೆ ಮೂಲಕ ಸ್ವಾಗತಿಸಿದ್ದಾರೆ.
ಶಿರಸಿ ನಗರದ ನಿಲೇಕಣಿ ಗಣಪತಿ ದೇವಾಲಯದಿಂದ ಬೈಕ್ ರ‍್ಯಾಲಿ ನಡೆಯಿತು. ವಿದ್ಯಾರ್ಥಿಗಳು, ಎನ್‌ಸಿಸಿ ಸ್ವಯಂ ಸೇವಕರು ಸಹ ರ‍್ಯಾಲಿ ನಡೆಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕಿರಣಕುಮಾರ ನಾಯ್ಕ, ಶಿರಸಿ ತಾಲೂಕು ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷ ಬಿ ವಿ ಗಣೇಶ ಜಂಟಿ, ಸ್ಪಂದನಾ ಸ್ಫೋರ್ಡ್ಸ ಅಕಾಡೆಮಿ ಅಧಕ್ಷ ರವೀಂದ್ರ ನಾಯ್ಕ, ಪ್ರಮುಖರಾದ ಶ್ರೀನಿವಾಸ ನಾಯ್ಕ, ವೆಂಕಟೇಶ ನಾಯ್ಕ, ದೀಪಕ ದೋಡ್ಡುರ್, ನಾಗಭೂಷಣ ಗೌಡ ಜೊತೆ ನಿವೃತ್ತ ಸೈನಿಕ ಸಂಘದ ಅಧ್ಯಕ್ಷ ಎಂ ವಿ ಹೆಗಡೆ ಸೇರಿ ಕಾಶಿನಾಥ ನಾಯ್ಕ ಅವರನ್ನು ಬರಮಾಡಿಕೊಂಡರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಶಿನಾಥ ನಾಯ್ಕ ಅವರು `ದೇಶ ರಕ್ಷಣೆಯಲ್ಲಿ ಸೈನಿಕರ ಕೊಡುಗೆ ಅಪಾರ. ಯುವಕರು ಸೇನೆ ಸೇರಲು ಆಸಕ್ತಿವಹಿಸಬೇಕು’ ಎಂದು ಕರೆ ನೀಡಿದರು ನಗರ ಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ನಿವೃತ್ತ ಸೈನಿಕ ರಾಮು, ಪ್ರಮುಖರಾದ ಗಣಪತಿ ನಾಯ್ಕ, ಪ್ರದೀಪ ಶೆಟ್ಟಿ, ಜಗದೀಶ ಇತರರು ಇದ್ದರು.




