ಸಾರ್ವಜನಿಕ ಪ್ರದೇಶದಲ್ಲಿ ಅನುಮತಿ ಇಲ್ಲದೇ ಸರಾಯಿ ಸೇವಿಸುತ್ತಿದ್ದ ಕಾರಣ ಹೊನ್ನಾವರದ ಸುಬ್ರಹ್ಮಣ್ಯ ನಾಯ್ಕ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
ಕೋಡಾಣಿ ಪಂಚಾಯತ ವ್ಯಾಪ್ತಿಯ ಹಿನ್ನೂರಿನ ಸುಬ್ರಹ್ಮಣ್ಯ ಮಂಜುನಾಥ ನಾಯ್ಕ (24) ಅವರು ಮುಂಡಾರ ಸರ್ಕಲ್ ಬಳಿ ಅಂಗಡಿಯೊAದನ್ನು ನಡೆಸುತ್ತಾರೆ. ಫೆಬ್ರವರಿ 3ರ ಮಧ್ಯಾಹ್ನ ಅವರು ತಮ್ಮ ಅಂಗಡಿ ಹಿಂದೆ ಸರಾಯಿ ಸೇವಿಸುತ್ತಿದ್ದರು.
ಆ ಸ್ಥಳ ಸಾರ್ವಜನಿಕ ಪ್ರದೇಶವಾಗಿದ್ದು, ಅಲ್ಲಿ ಸರಾಯಿ ಸೇವನೆಗೆ ಅವಕಾಶವಿರಲಿಲ್ಲ. ಹೀಗಾಗಿ ಈ ವಿಷಯ ಅರಿತ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಭರತಕುಮಾರ ದಾಳಿ ನಡೆಸಿದರು. ಸರಾಯಿ ವಶಕ್ಕೆ ಪಡೆದ ಅವರು ಪ್ರಕರಣ ದಾಖಲಿಸುವ ಮೂಲಕ ಸುಬ್ರಹ್ಮಣ್ಯ ನಾಯ್ಕರ ನಶೆ ಇಳಿಸಿದರು.