ಅನಾಥಾಶ್ರಮದಲ್ಲಿರುವವರಿಗೆ ಸಿಹಿ ತಿನಿಸು, ಹೊಸ ಬಟ್ಟೆ ಜೊತೆ ಅವರಿಗೆ ಅಗತ್ಯವಿರುವ ಊಟದ ಲೋಟ-ತಾಟುಗಳನ್ನು ವಿತರಿಸುವ ಮೂಲಕ ಲಾಸ್ಯ ಅವರು ತಮ್ಮ 8ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಲಾಸ್ಯ ಅವರು ಯಲ್ಲಾಪುರ ತಾಲೂಕಿನ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಅವರ ಪುತ್ರಿ. ಅವರು ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದಾರೆ. ಬಾಲ್ಯದಿಂದಲೂ ವೃದ್ಧರು-ಅನಾಥರ ಬಗ್ಗೆ ಲಾಸ್ಯ ಅವರಿಗೆ ಅಪಾರ ಕನಿಕರ. ಈ ಹಿನ್ನಲೆ ತಮ್ಮ 8ನೇ ವರ್ಷದ ಹುಟ್ಟುಹಬ್ಬವನ್ನು ಅನಾಥ ಆಶ್ರಮದಲ್ಲಿ ಆಚರಿಸುವ ಬಗ್ಗೆ ಅವರು ನಿರ್ಧರಿಸಿದ್ದು, ಇದಕ್ಕೆ ಕುಟುಂಬದವರೆಲ್ಲರೂ ಖುಷಿಯಿಂದ ಒಪ್ಪಿಕೊಂಡರು.
ಅದರ ಪ್ರಕಾರ ಸೋಮವಾರ ಲಾಸ್ಯ ಅವರು ತಮ್ಮ ತಂದೆ ಬಸವರಾಜ ಬೋಚ್ಚಳ್ಳಿ, ತಾಯಿ ಚೈತನ್ಯ ಜೊತೆ ಬಂಧು-ಬಳಗದವರನ್ನು ಕರೆದುಕೊಂಡು ಸಿದ್ದಾಪುರ ಮುಗದೂರಿನ ಪುನೀತ್ ರಾಜಕುಮಾರ್ ಆಶ್ರಯಧಾಮಕ್ಕೆ ಭೇಟಿ ನೀಡಿದರು. ಅನಾಥಾಶ್ರಮದಲ್ಲಿರುವವರಿಗೆ ಹೊಸ ಬಟ್ಟೆ, ಊಟದ ಬಟ್ಟಲು-ಲೋಟ, ಆಹಾರವನ್ನು ಒದಗಿಸಿದರು. ಅಲ್ಲಿಯೇ ಕೇಕ್ ಕತ್ತರಿಸಿ ಅನಾಥರ ಬಾಯಿಯನ್ನು ಸಿಹಿಯಾಗಿಸಿದರು. ಬಾಲ್ಯದಲ್ಲಿಯೇ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡ ಲಾಸ್ಯ ಅವರ ನಡವಳಿಕೆಗೆ ಆಶ್ರಮವಾಸಿಗಳು ಸಂತಸದಿoದ ಹಾರೈಸಿದರು.
ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಅವರು ಸಹ ಮಾನವೀಯ ನೆಲೆಯಲ್ಲಿ ಕೆಲಸ ಮಾಡುವ ಅಧಿಕಾರಿ. ಶಿರಸಿಯಲ್ಲಿ ಅವರು ಕಾರ್ಯನಿರ್ವಹಿಸುವ ವೇಳೆಯಲ್ಲಿ ಸಹ ಅನಾಥ ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಅಲ್ಲಿನ ಆಗು-ಹೋಗುಗಳ ಬಗ್ಗೆ ಅರಿತಿದ್ದ ಅವರು ಮಗಳ ಹುಟ್ಟುಹಬ್ಬದ ಸಡಗರವನ್ನು ಹೆಚ್ಚಿಸಲು 72 ಜನ ಆಶ್ರಮವಾಸಿಗಳಿಗೂ ನೆರವು ನೀಡಿದರು.
ಸಿದ್ದಾಪುರ ವಲಯ ಅರಣ್ಯಾಧಿಕಾರಿ ಅಜಯಕುಮಾರ್ ಎಮ್ ಎಸ್, ವಾಲ್ಮೀಕಿ ಗ್ಯಾಸ್ ಎಜನ್ಸಿ ಮುಖ್ಯಸ್ಥ ಮಂಜುನಾಥ ವಾಲ್ಮೀಕಿ, ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ, ಪ್ರಮುಖರಾದ ಮಮತಾ ನಾಯ್ಕ ಇದ್ದರು.
ನಿಮ್ಮ ಮಕ್ಕಳ ಹುಟ್ಟುಹಬ್ಬವನ್ನು ಅನಾಥಾಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಉದ್ದೇಶಿಸಿದ್ದೀರಾ? ಹಾಗಾದರೆ ಇಲ್ಲಿ ಫೋನ್ ಮಾಡಿ: 8073197439