ಮತ್ಸ್ಯಗಂಧ ಎಕ್ಸಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ ನರೇಂದ್ರ ಮಂಡೋನ್ ಅವರ ಬ್ಯಾಗನ್ನು ಕಳ್ಳರು ಅಪಹರಿಸಿದ್ದಾರೆ. ಈ ಬಗ್ಗೆ ಅವರು ರೈಲ್ವೆ ಪೊಲೀಸರಿಗೆ ನೀಡಿದ ದೂರು ತನಿಖೆಗಾಗಿ ಹೊನ್ನಾರ ಪೊಲೀಸರಿಗೆ ವರ್ಗವಾಗಿದೆ.
ಮುಂಬೈಯ ನರೇಂದ್ರ ಮಂಡೋನ್ ಅವರು 2024ರ ಡಿಸೆಂಬರ್ 23ರಂದು ಮತ್ಸ್ಯಗಂಧ ಎಕ್ಸಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದರು. ಸಂಜೆ 5.17ರ ಆಸುಪಾಸಿಗೆ ಅವರು ಹೊನ್ನಾವರ ತಲುಪಿದ್ದು, ಆಗ ಕಳ್ಳರು ಅವರ ಬ್ಯಾಗ್ ಅಪಹರಿಸಿದರು.
ಅದರಲ್ಲಿ ನರೇಂದ್ರ ಮಂಡೋನ್ ಅವರ ಆಧಾರ್ ಕಾರ್ಡ, ಡೆಬಿಟ್ ಕಾರ್ಡ, ಲಾಪ್‌ಟಾಪ್, ಎಲೆಕ್ಷನ್ ಕಾರ್ಡಗಳಿದ್ದವು. ಒಟ್ಟು 20 ಸಾವಿರ ರೂ ಮೌಲ್ಯದ ಸಾಮಗ್ರಿ ಕಳ್ಳತನವಾದ ಬಗ್ಗೆ ಅವರು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದರು. ಆ ದೂರು ಇದೀಗ ಹೊನ್ನಾವರ ಪೊಲೀಸರಿಗೆ ವರ್ಗಾವಣೆಯಾಗಿದೆ.



