6 Skip to content

ನಾಗರಕಟ್ಟೆ ಕಾಡಿನಲ್ಲಿದ್ದ `ಎಲೆ’ಮಾನವರ ಸೆರೆ

ಅಂಕೋಲಾ: ಅವರ್ಸಾ ಬಳಿಯ ದೇವನಭಾಗ ನಾಗರಕಟ್ಟೆ ಎದುರಿನ ಕಾಡುಪ್ರದೇಶದಲ್ಲಿ ಇಸ್ಪಿಟ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಜೂ 19ರಂದು ಮಧ್ಯಾಹ್ನ ನಾಡವರಕೇರಿಯ ನಾರಾಯಣ ನಾಯಕ, ದೇವನಭಾಗದ ಪ್ರಕಾಶ ಪಡ್ತಿ ಎಂಬಾತರು ಇನ್ನಿತರರನ್ನು ಸೇರಿಸಿಕೊಂಡು ಜೂಜಾಟ ನಡೆಸುತ್ತಿದ್ದರು. `ಒಳಗೆ 100ರೂ, ಹೊರಗೆ 200ರೂ’ ಎನ್ನುತ್ತ ಇಸ್ಪಿಟ್ ಎಲೆಗಳ ಮೇಲೆ ಬೆಟ್ಟಿಂಗ್ ಕಟ್ಟಿ ಆಟದಲ್ಲಿ ಅವರು ಮೈ ಮರೆತಿದ್ದರು. ಸದ್ದಿಲ್ಲದೇ ಅಲ್ಲಿಗೆ ಬಂದ ಪೊಲೀಸ್ ಉಪನಿರೀಕ್ಷಕ ಸುನೀಲ ಹಲ್ಲೊಳ್ಳಿ ಅವರ ಮೇಲೆ ದಾಳಿ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದರು. ಅವರ ಬಳಿಯಿದ್ದ 5500ರೂ ಹಣದ ಜೊತೆ ಇಸ್ಪಿಟ್ ಎಲೆಗಳನ್ನು ಅವರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Leave a comment

Leave a Reply

You cannot copy content of this page